ಕಾಸರಗೋಡು: ತೆಂಗಿನನಾರು ಇಲಾಖೆ, ಕಣ್ಣೂರು ತೆಂಗಿನನಾರು ಯೋಜನೆ ಕಚೇರಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೇಗಳ ಪ್ರತಿನಿಧಿಗಳಿಗಾಗಿ ತೆಂಗಿನನಾರು ಭೂಹಾಸು ಅವಲೋಕನ ವಿಚಾರಸಂಕಿರಣ ಕಾಞಂಗಾಡಿನಲ್ಲಿ ಜರುಗಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿಬಾಲಕೃಷ್ಣನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸ್ವಂತ ಜಾಗ ಹೊಂದಿರುವ ಗ್ರಾಮ ಪಂಚಾಯತ್ ಗಳು ತೆಂಗಿನನಾರು ಯೋಜನೆಗಳನ್ನು ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಕುಸುಮಾ ಹೆಗ್ಡೆ, ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್, ಜಿಲ್ಲಾ ಪಂಚಾಯತ್ ಹಿರಿಯ ವರಿಷ್ಠಾಧಿಕಾರಿ ಆರ್.ಎಸ್.ಶ್ರೀಜಾ ಉಪಸ್ಥಿತರಿದ್ದರು. ಪರಿಣತರಾದ ಕೆ.ಪ್ರದೀಪ್, ಶ್ರೀವರದನ್ ನಂಬೂದಿರಿ ತರಗತಿ ನಡೆಸಿದರು. ಕಣ್ಣೂರು ತೆಂಗಿನನಾರು ಯೋಜನೆ ಕಚೇರಿಯ ಅಧಿಕಾರಿ ಎಸ್.ಕೆ.ಸುರೇಶ್ ಕುಮಾರ್ ಸ್ವಾಗತಿಸಿದರು. ಸಹಾಯಕ ರೆಜಿಸ್ತ್ರಾರ್ ಪಿ.ಶಾಲಿನಿ ವಂದಿಸಿದರು.




