ಕಾಸರಗೋಡು: ಅನರ್ಟ್ ಮುಖಾಂತರ ಗೃಹಬಳಕೆಗಾಗಿ ಸೌರ ವಿದ್ಯುತ್ ಪ್ಲಾಂಟ್ ಸ್ಥಾಪನೆಗಾಗಿ ಆರಂಭಿಸಲಾದ 'ಸೌರ ತೇಜಸ್' ಯೋಜನೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಎರಡರಿಂದ ಹತ್ತು ಕಿ.ವ್ಯಾಟ್ ವರೆಗಿನ ಪ್ಲಾಂಟ್‍ಗಳನ್ನು ಸ್ಥಾಪಿಸಲು ಆಸಕ್ತಿಯುಳ್ಳವರು www.buymysun.com ಎಂಬ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಎರಡರಿಂದ ಮೂರು ಕಿ.ವ್ಯಾಟ್ ಸಾಮಥ್ರ್ಯದ ಪ್ಲಾಂಟ್ ನಿರ್ಮಾಣಕ್ಕೆ ಶೇ. 40ಹಾಗೂ ಮೂರರಿಂದ ಮೇಲಿನ ಸಾಮಥ್ರ್ಯದ ಪ್ಲಾಂಟ್ ನಿರ್ಮಾಣಕ್ಕೆ ಶೇ. 20 ಸಬ್ಸಿಡಿ ಲಭಿಸಲಿದೆ. ನೋಂದಾವಣೆ ಪ್ರಾಶಸ್ತ್ಯದೊಂದಿಗೆ ಸಬ್ಸಿಡಿ ಲಭ್ಯವಾಗಲಿರುವುದಾಗಿ ಪ್ರಕಟಣೆ ತಿಳಿಸಿದೆ.




