ಕಾಸರಗೋಡು: ಜಿಲ್ಲಾ ಕ್ಯಾರಮ್ಸ್ ಚಾಂಪ್ಯನ್‍ಶಿಪ್ ಚೆರ್ವತ್ತೂರಿನಲ್ಲಿ ನಡೆಯಲಿದ್ದು, ಈ ಬಗ್ಗೆ ಕ್ಯಾರಮ್ಸ್ ಅಸೋಸಿಯೇಶನ್‍ನ ಸಮಿತಿ ರಚನಾ ಸಭೆ ಚೆರ್ವತ್ತೂರಿನಲ್ಲಿ ಜರುಗಿತು.
ಕ್ಯಾರಮ್ಸ್ ಅಸೋಸಿಯೇಶನ್ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಪಿ ಚಂದ್ರಶೇಖರನ್ ಸಮಾರಂಭ ಉದ್ಘಾಟಿಸಿದರು. ನೀಲೇಶ್ವರ ನಗರಸಭಾ ಮಾಜಿ ಅಧ್ಯಕ್ಷ ಪ್ರೊ. ಕೆ.ಪಿ ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಉಪಾಧ್ಯಕ್ಷ ಪಿ.ಪಿ ಮಹಮ್ಮದ್ ರಾಫಿ, ಗಣೇಶ್ ಅರಮಂಗಾನ, ಹಿರಿಯ ಪತ್ರಕರ್ತ ಟಿ.ರಾಜನ್, ಕಾಞಂಗಾಡು ಪ್ರೆಸ್‍ಫಾರಂ ಜತೆಕಾರ್ಯದರ್ಶಿ ಕೆ.ಎನ್ ಹರಿ, ಎಂ. ಮನೋಜ್ ಪಳ್ಳಿಕೆರೆ, ವನಜ ವಿದ್ಯಾನಗರ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ರೊ. ಕೆ.ಪಿ ಜಯರಾಜನ್ ಅಧ್ಯಕ್ಷ, ಶ್ಯಾಂ ಬಾಬು ವೆಳ್ಳಿಕ್ಕೋತ್ ಕಾರ್ಯದರ್ಶಿ ಹಾಗೂ ಗಣಶ್ ಅರಮಂಗಾನ ಕೋಶಾಧಿಕಾರಿಯಾಗಿರುವ ಸಮಿತಿ ರಚಿಸಲಾಯಿತು.




