ಮಂಜೇಶ್ವರ: ಕುಂಜತ್ತೂರು ತೂಮಿನಾಡಿನ ಶ್ರೀ ನಾಗರಾಜ, ನಾಗಕನ್ನಿಕಾ ಸಾನಿಧ್ಯ ಮತ್ತು ಬ್ರಹ್ಮಶ್ರೀ ಮುಗೇರ ಮಹಾಕಾಳಿ ಮೂಲ ಭಂಡಾರ ಸ್ಥಾನ ಜೀರ್ಣೋದ್ಧಾರ ಸಮಿತಿ ನೇತೃತ್ವದಲ್ಲಿ ಶ್ರೀ ನಾಗರಾಜ ನಾಗಕನ್ನಿಕಾ ಸಾನಿಧ್ಯ ನಿರ್ಮಾಣ ಮತ್ತು ಬ್ರಹ್ಮಶ್ರೀ ಮುಗೇರ ಮಹಾಕಾಳಿ ಮೂಲ ಭಂಡಾರ ಸ್ಥಾನ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.
ಶ್ರೀಕೃಷ್ಣಾ ಶಿವಕೃಪಾ ಕುಂಜತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಟೀಲು ಶ್ರೀಕ್ಷೇತ್ರದ ಕಮಲಾದೇವಿ ಪ್ರಸಾದ ಆಸ್ರಣ್ಣ ದೀಪ ಪ್ರಜ್ವಲನೆ ನಡೆಸಿದರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಕರ್ನಾಟಕ ಸಚಿವ ಅಂಗಾರ ಮುಖ್ಯ ಅತಿಥಿಯಾಗಿದ್ದರು.
ವೇದಿಕೆಯಲ್ಲಿ ಮಾಡ ಸನ್ನಿಧಿಯ ದೈವಪಾತ್ರಿ ರಾಜ ಬೆಲ್ಚಾಡ, ಬಾಬು ಪಚ್ಲಂಪ್ಪಾರೆ, ಮೋಹನ್ ಶೆಟ್ಟಿ ತೂಮಿನಾಡು, ಸೋಮಶೇಖರ್, ಆನಂದ ಮಾಸ್ತರ್, ರಾಧಾಕೃಷ್ಣ ಆಚಾರ್ಯ, ಪುರುಷೋತ್ತಮ ದೇರೆಬೈಲು, ಹರೀಶ್ ಶೆಟ್ಟಿ ಮಾಡ, ದೇವದಾಸ್ ತೂಮಿನಾಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.




