ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯ ಕ್ಯಾಂಪಸ್‍ನಲ್ಲಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಕಿಂಡರ್ ಗಾರ್ಟನ್ ಪಾರ್ಕ್‍ನ ಲೋಕಾರ್ಪಣೆ ಕಾರ್ಯಕ್ರಮ ನ.15ರಂದು ಬೆಳಗ್ಗೆ 11.30ಕ್ಕೆ ಜರುಗಲಿದೆ. ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಪೆರಿಯ ಕ್ಯಾಂಪಸ್ ಉಪಕುಲಪತಿ ಪ್ರೊ, ಎಚ್. ವೆಂಕಟೇಶ್ವರಲು ಪಾರ್ಕ್ ಉದ್ಘಾಟಿಸುವರು. ಕೇರಳ ಚಿನ್ಮಯ ಮಿಶನ್ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಅಧ್ಯಕ್ಷತೆ ವಹಿಸುವರು.




