ನವದೆಹಲಿ: ಕೋವಿಡ್ ಪಿಡುಗಿನಿಂದಾಗಿ ಕಚೇರಿ ಕಾರ್ಯಗಳಿಗೆ ಅಡಚಣೆ ಉಂಟಾಗಿತ್ತು. ಈಗ ಕಚೇರಿ ಕೆಲಸವನ್ನು ಯಥಾಸ್ಥಿತಿಗೆ ತರುವ ಪ್ರಕ್ರಿಯೆಗಳು ನಡೆಯುತ್ತಿರುವ ಕಾರಣ, ವಲಸೆಯೇತರ ವೀಸಾ ಕೋರಿ ಅರ್ಜಿ ಸಲ್ಲಿಸಿದವರು ಇನ್ನಷ್ಟು ದಿನ ಕಾಯಬೇಕಾಗುತ್ತದೆ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.
0
samarasasudhi
ನವೆಂಬರ್ 01, 2021
ನವದೆಹಲಿ: ಕೋವಿಡ್ ಪಿಡುಗಿನಿಂದಾಗಿ ಕಚೇರಿ ಕಾರ್ಯಗಳಿಗೆ ಅಡಚಣೆ ಉಂಟಾಗಿತ್ತು. ಈಗ ಕಚೇರಿ ಕೆಲಸವನ್ನು ಯಥಾಸ್ಥಿತಿಗೆ ತರುವ ಪ್ರಕ್ರಿಯೆಗಳು ನಡೆಯುತ್ತಿರುವ ಕಾರಣ, ವಲಸೆಯೇತರ ವೀಸಾ ಕೋರಿ ಅರ್ಜಿ ಸಲ್ಲಿಸಿದವರು ಇನ್ನಷ್ಟು ದಿನ ಕಾಯಬೇಕಾಗುತ್ತದೆ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.
ನೂತನ ಅಂತರರಾಷ್ಟ್ರೀಯ ವಿಮಾನ ಪ್ರಯಾಣ ನೀತಿಯಂತೆ ಲಸಿಕೆಯ ಪೂರ್ಣಪ್ರಮಾಣದ ಡೋಸ್‌ಗಳನ್ನು ಪಡೆದಿರುವವರು ನ.8ರಿಂದ ಅಮೆರಿಕಕ್ಕೆ ಪ್ರಯಾಣಿಸಬಹುದು. ವೀಸಾ ಹೊಂದಿರುವ 30 ಲಕ್ಷ ಜನರು ಭಾರತದಿಂದ ಆ ದಿನದಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಲು ಇದರಿಂದ ಸಾಧ್ಯವಾಗಲಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
'ಅಮೆರಿಕಕ್ಕೆ ಪ್ರಯಾಣ ಕೈಗೊಳ್ಳಲು ನೆರವು ನೀಡುವ ಮೂಲಕ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ಗಟ್ಟಿಗೊಳಿಸುವುದು ನಮ್ಮ ಆದ್ಯತೆಯಾಗಿದೆ. ವೀಸಾ ಅರ್ಜಿಗಳ ವಿಲೇವಾರಿ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಅರ್ಜಿದಾರರು ಹಾಗೂ ನಮ್ಮ ಸಿಬ್ಬಂದಿಯ ಸುರಕ್ಷತೆಯೂ ಮುಖ್ಯ' ಎಂದೂ ಕಚೇರಿ ತಿಳಿಸಿದೆ.