HEALTH TIPS

ತಂಗಳು ಆಹಾರ ಸೇವನೆ ಸುರಕ್ಷಿತವೇ?

                 ಇ0ದು ಫಾಸ್ಟ್ ಮೂವಿಂಗ್ ಲೈಫ್. ಇಲ್ಲಿ ಸಮಯದ ಅಭಾವವೇ ಹೆಚ್ಚು. ಈ ಒತ್ತಡದ ಜೀವನದಿಂದಾಗಿ, ಜನರು ಅಗತ್ಯಕ್ಕಿಂತ ಹೆಚ್ಚು ಅಡುಗೆ ಮಾಡಿ ಫ್ರಿಡ್ಜ್‌ನಲ್ಲಿ ಇಡುವುದು ಸಾಮಾನ್ಯ. ಇದರಿಂದ ಮತ್ತೆ ಮತ್ತೆ ಅಡುಗೆ ಮಾಡುವ ಅಗತ್ಯವಿಲ್ಲ ಜೊತೆಗೆ ಸಮಯದ ಉಳಿತಾಯವಾಗುತ್ತದೆ ಎಂಬ ಮನಸ್ಥಿತಿ. ಆದರೆ ಹೀಗೆ ಉಳಿದ ಅಥವಾ ಮಿಕ್ಕ ಆಹಾರವನ್ನು ದೀರ್ಘಕಾಲದವರೆಗೆ ಇಡುವುದರಿಂದ ಅದು ತಂಗಳಾಗುತ್ತದೆ.
                ಆದರೆ, ಈ ತಂಗಳು ಆಹಾರ ಸೇವನೆ ಎಷ್ಟು ಸರಿ? ಈ ಕುರಿತು ಆಯುರ್ವೇದದ ನಿಲುವೇನು? ಅಡುಗೆ ಮಾಡಿದ ಎಷ್ಟು ಸಮಯದ ನಂತರ ಅದು ತಂಗಳಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಇಲ್ಲಿ ತಿಳಿಯೋಣ.
               ತಂಗಳು ಆಹಾರ ಸೇವನೆ ಕುರಿತು ಆಯುರ್ವೇದ ಏನು ಹೇಳುತ್ತದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ: 
                  ಆಯುರ್ವೇದ ಏನು ಹೇಳುತ್ತದೆ?: ತಾಜಾ ಆಹಾರದಲ್ಲಿರುವ ರುಚಿ ಮತ್ತು ಪೌಷ್ಟಿಕಾಂಶಗಳು ಮತ್ತೊಮ್ಮೆ ಬಿಸಿ ಮಾಡಿ ಸೇವಿಸುವಾಗ ಇರುವುದಿಲ್ಲ. ಆಯುರ್ವೇದದ ಪ್ರಕಾರ, ಆಹಾರ ತಯಾರಾದ ಮೂರು ಘಂಟೆಗಳ ಒಳಗಾಗಿ ಸೇವಿಸಬೇಕು ಹಾಗೂ ಮತ್ತೊಮ್ಮೆ ಬಿಸಿ ಮಾಡಬಾರದು. ಆದರೆ, ಈಗಿನ ಕಾಲಕ್ಕೆ ಇದು ಆಗದ ಮಾತು. ಹಾಗಾಗಿ, ಆಹಾರ ತಯಾರಾದ ಗರಿಷ್ಟ 24 ಗಂಟೆಗಳ ಒಳಗೆ ಸೇವಿಸಬಹುದು. ಅದೂ ಸೂಕ್ತ ರೀತಿಯಲ್ಲಿ ಸಂಗ್ರಹಿಸಿಟ್ಟರೆ ಮಾತ್ರ. ಅದಕ್ಕಿಂತ ಹೆಚ್ಚು ಕಾಲ ಇಟ್ಟ ಆಹಾರವನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಇದು ವಾಂತಿ, ಭೇದಿ ಮತ್ತು ಅತಿಸಾರದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಯಾವಾಗಲೂ ತಾಜಾವಾಗಿ ತಯಾರಿಸಿದ ಆಹಾರವನ್ನು ಸೇವಿಸಬೇಕು ಎಂದು ಆಯುರ್ವೇದ ಹೇಳುತ್ತದೆ.
          ತಂಗಳು ಆಹಾರ ಸೇವನೆ ಸುರಕ್ಷಿತವೇ?: ಆಯುರ್ವೇದ ತಜ್ಞರ ಪ್ರಕಾರ, ತಂಗಳು ಆಹಾರ ಸೇವನೆಯಿಂದ ದೇಹದ ದೋಶಗಳು ಹೆಚ್ಚುತ್ತವೆ ಹಾಗೂ ಇವು ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತವೆ. ಒಂದು ವೇಳೆ ತಯಾರಿಸಿದ ಆಹಾರವನ್ನು ಸೂಕ್ತ ವಿಧಾನದಲ್ಲಿ ಸಂಗ್ರಹಿಸಿಟ್ಟು ತಿನ್ನುವ ಸಮಯದಲ್ಲಿ ಚೆನ್ನಾಗಿ ಬಿಸಿ ಮಾಡಿ ಸೇವಿಸಿದರೆ ಈ ಆಹಾರದಲ್ಲಿ ಬ್ಯಾಕ್ಟೀರಿಯಾಗಳ ಇರುವಿಕೆಯನ್ನು ಕಡಿಮೆ ಮಾಡಬಹುದು. ಆದರೆ, ವಾಸ್ತವಾಗಿ ಈ ರೀತಿ ಮಿಕ್ಕ ಆಹಾರವನ್ನು ಬಿಸಿ ಮಾಡಿ ತಿನ್ನುವುದರಿಂದ ಮಾಡುವುದಿರಿಂದ, ಆಹಾರದಲ್ಲಿರುವ ಪೌಷ್ಟಿಕಾಂಶಗಳು ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಫ್ರಿಜ್ಜಿನಲ್ಲಿಟ್ಟರೂ ಈ ಆಹಾರವನ್ನು ಗರಿಷ್ಟ ಇಪ್ಪತ್ತನಾಲ್ಕು ಘಂಟೆಗಳ ಒಳಗಾಗಿ ಸೇವಿಸಬೇಕು. ಇಲ್ಲವಾದಲ್ಲಿ ಈ ಕೆಳಗಿನ ಸಮಸ್ಯೆಗಳಿಗೆ ಕಾರಣವಾಗಬಹುದು:
            ತಂಗಳ ಆಹಾರ ಸೇವನೆಯಿಂದ ಉಂಟಾಗುವ ಸಮಸ್ಯೆಗಳು: ಆಯುರ್ವೇದದ ಪ್ರಕಾರ, ಅಡುಗೆ ಮಾಡಿದ ಎರಡು ಗಂಟೆಗಳ ಒಳಗೆ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಡದಿದ್ದರೆ, ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಗಳು ಹೆಚ್ಚು. ಮತ್ತೊಂದೆಡೆ, ಅದನ್ನು ದೀರ್ಘಕಾಲದವರೆಗೆ ಫ್ರಿಜ್ನಲ್ಲಿ ಅಥವಾ ಫ್ರಿಜ್ನ ಹೊರಗೆ ಇರಿಸಿದರೆ, ಅದು ಫುಡ್ ಪಾಯಿಸನ್ ಉಂಟುಮಾಡಬಹುದು. ಇತ್ತೀಚಿನ ಇತ್ತೀಚಿನ ದಿನಗಳಲ್ಲಿ ಜನರು ಮಿಕ್ಕ ಆಹಾರವನ್ನು ಮೈಕ್ರೊವೇವ್‌ನಲ್ಲಿ ಬಿಸಿ ಮಾಡಿ ಸಹ ತಿನ್ನುತ್ತಾರೆ. ಆದರೆ ಮೈಕ್ರೋವೇವ್‌ನಲ್ಲಿ ಬಿಸಿ ಮಾಡುವುದರಿಂದ ಆಹಾರದ ಎಲ್ಲಾ ಪೌಷ್ಟಿಕಾಂಶಗಳು ನಾಶವಾಗುತ್ತವೆ. ಕೆಲವೊಮ್ಮೆ ಇದು ಆಹಾರ ವಿಷಕ್ಕೆ ಕಾರಣವಾಗುತ್ತದೆ. ತಜ್ಞರ ಪ್ರಕಾರ, ಮಾಂಸ ಅಥವಾ ಡೈರಿ ಉತ್ಪನ್ನಗಳನ್ನು ಮತ್ತೆ ಬಿಸಿ ಮಾಡಿ ತಿನ್ನಬಾರದು. ಏಕೆಂದರೆ ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಆದ್ದರಿಂದ ಅದನ್ನು ಮತ್ತೆ ಮತ್ತೆ ಬಿಸಿಮಾಡಿದಾಗ, ಅದು ವಿಷಕಾರಿಯಾಗುತ್ತದೆ, ಇದು ಗಂಭೀರವಾದ ಹೊಟ್ಟೆ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತದೆ.
            ಈ ವಿಷಯಗಳನ್ನು ನೆನಪಿನಲ್ಲಿಡಿ: ತಜ್ಞರ ಪ್ರಕಾರ, ಸಮಯದ ಕೊರತೆ ಅಥವಾ ಕಾರ್ಯನಿರತತೆಯಿಂದಾಗಿ ತಾಜಾ ಆಹಾರವನ್ನು ತಯಾರಿಸಲು ಸಾಧ್ಯವಾಗದಿದ್ದರೆ, ಅಡುಗೆ ಮಾಡಿದ 90 ನಿಮಿಷಗಳಲ್ಲಿ ಅದನ್ನು ರೆಫ್ರಿಜರೇಟರ್ನಲ್ಲಿ ಇಡಬೇಕು. ಅಲ್ಲದೆ, ಉಳಿದ ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡಬಾರದು, ಏಕೆಂದರೆ ಅದು ಆಹಾರದ ಎಲ್ಲಾ ಪೌಷ್ಟಿಕಾಂಶಗಳನ್ನು ನಾಶಪಡಿಸುತ್ತದೆ. ಆದ್ದರಿಂದ, ಅನಿವಾರ್ಯ ಸಂದರ್ಭಗಳ ಹೊರತಾಗಿ ಸಾಧ್ಯವಾದಷ್ಟೂ ಮಟ್ಟಿಗೆ ತಾಜಾ ಆಹಾರವನ್ನೇ ಸೇವಿಸುವುದು ಅಗತ್ಯ. ಒಂದು ವೇಳೆ ಆಹಾರ ಸಂಗ್ರಹಣೆ ಅಥವಾ ತಾಪಮಾನದಲ್ಲಿನ ಏರುಪೇರಿನ ಮೂಲಕ ಆಹಾರ ಕೆಟ್ಟರೆ, ಈ ಆಹಾರ ವಿಷಾಹಾರವಾಗಬಹುದು ಹಾಗೂ ಆರೋಗ್ಯವನ್ನು ಕೆಡಿಸಬಹುದು.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries