HEALTH TIPS

15-18 ವರ್ಷದವರು ಕೋವಿಡ್‌ ಲಸಿಕೆಗಾಗಿ ನೋಂದಣಿ ಮಾಡುವುದು ಹೇಗೆ?

         ಮಕ್ಕಳಿಗೆ ಯಾವಾಗ ಲಸಿಕೆ ಬರುತ್ತದೆ ಎಂದು ಪೋಷಕರು ಆತಂಕದಿಂದ ಎದುರು ನೋಡುತ್ತಿದ್ದರು, ಮಕ್ಕಳಿಗೆ ಶಾಲೆ ಶುರುವಾಗಿರುವುದರಿಂದ ಲಸಿಕೆ ಬಂದ್ರೆ ಸಾಕು ಎಂದು ಪೋಷಕರು ಬಯಸುತ್ತಿದ್ದಾರೆ, ಅದರಲ್ಲಿ ಈಗ ಹದಿ ಹರೆಯದ ಪ್ರಾಯದವರಿಗೆ 15-18 ವರ್ಷದವರಿಗೆ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಜನವರಿ 1ರಿಂದ CoWIN ಆ್ಯಪ್‌ನಲ್ಲಿ ನೋಂದಣ ಮಾಡಿ ಲಸಿಕೆ ಪಡೆಯಬಹುದು.

           ನೋಂದಣಿ ಮಾಡಲು ಏನೆಲ್ಲಾ ದಾಖಲೆಗಳು ಬೇಕು, ನೋಂದಣಿ ಮಾಡುವುದು ಹೇಗೆ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:
             ನೋಂದಣಿ ಮಾಡಲು ಬೇಕಾದ ದಾಖಲೆ 
    * CoWIN ಆ್ಯಪ್‌ನಲ್ಲಿ ನೋಂದಣಿ ಮಾಡಲು ಸ್ಟೂಡೆಂಟ್ ಐಡಿ (ವಿದ್ಯಾರ್ಥಿಗಳ ಐಡಿ ಕಾರ್ಡ್) ಬೇಕು. ಏಕೆಂದರೆ ಕೆಲ ಮಕ್ಕಳಿಗೆ ಆಧಾರ್‌ ಅಥವಾ ಇತರ ದಾಖಲೆಗಳು ಇರುವುದಿಲ್ಲ, ಆದ್ದರಿಂದ ಸ್ಟೂಡೆಂಟ್ ಐಡಿ ಕಾರ್ಡ್ ಡಾಂಕ್ಯೂಮೆಂಟ್‌ ಆಗಿ ನೀಡಬಹುದು.
    * ಇದುವರೆಗೆ ವಯಸ್ಕರು ಹೇಗೆ ನೋಂದಣಿ ಮಾಡಿಕೊಳ್ಳುತ್ತಿದ್ದರೋ ಅದೇ ರೀತಿ ನೋಂದಣಿ ಮಾಡಬಹುದು.
         ಒಮಿಕ್ರಾನ್‌ ಆತಂಕ ಎದುರಾಗಿರುವುದಿಂದ 2007ಕ್ಕಿಂತ ಮೊದಲು ಜನಿಸಿದವರಿಗೆ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. 
            ಇದೀಗ ಮಕ್ಕಳಲ್ಲಿ ಕೋವಿಡ್‌ 19 ಸೋಂಕು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಸರ್ಕಾರ 15-18 ವರ್ಷದ ಪ್ರಯದವರಿಗೆ ಲಸಿಕೆ ನೀಡಲು ಮುಂದಾಗಿದೆ.
               ಮಕ್ಕಳಿಗೆ ಯಾವ ಲಸಿಕೆ ನೀಡಲಾಗುತ್ತಿದೆ?
            ಭಾರತದಲ್ಲಿ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಡಬಲ್‌ ಡೋಸ್‌ ವ್ಯಾಕ್ಸಿನ್ ಕೊವಾಕ್ಸಿನ್ ಅಥವಾ ಜೈಡಸ್‌ ಕ್ಯಾಡಿಲಾದ ZyCoV-D ಮೂರು ಡೋಸ್‌ ಲಸಿಕೆಗಳಲ್ಲಿ ಯಾವುದಾದರೂ ಒಂದು ಕಂಪನಿಯ ಲಸಿಕೆ ನೀಡಲಾಗುವುದು. ಈ ಎರಡೂ ಕಂಪನಿಯ ಲಸಿಕೆಗಳು ಮಕ್ಕಳಿಗೆ ನೀಡಲು ಸುರಕ್ಷಿತವಾಗಿದೆ ಎಂಬುವುದು ಕ್ಲಿನಿಕಲ್‌ ಟ್ರಯಲ್‌ನಿಂದ ಸಾಬೀತಾಗಿದೆ.
            ಚಿಕ್ಕ ಮಕ್ಕಳಿಗೆ ಲಸಿಕೆ ಯಾವಾಗ ಸಿಗುವುದು? 
      7-11 ವರ್ಷದ ಮಕ್ಕಳಿಗೆ ಸೆರಮ್‌ ಇನ್ಸಿಟ್ಯೂಟ್‌ನ ನೊವಾವ್ಯಾಕ್ಸ್‌ಗೆ, 5 ವರ್ಷದ ಮೇಲಿನ ಮಕ್ಕಳಿಗೆ ಬಯೋಲಾಜಿಕಲ್‌ E's Corbevaxಗೆ ಸುರಕ್ಷಿತವಾದ ಲಸಿಕೆ ಎಂದು ಡ್ರಗ್‌ ಕಂಟ್ರೋಲರ್‌ (ಔಷಧ ನಿಯಂತ್ರಕ ಸಂಸ್ಥೆ) ಅನುಮತಿ ನೀಡಿದೆ. ಆದರೆ ಅವುಗಳನ್ನು ಮಕ್ಕಳಿಗೆ ನೀಡಲು ಇನ್ನೂ ಅನುಮತಿ ಸಿಕ್ಕಿಲ್ಲ.
           ಪ್ರಿಕಾಷನ್‌ ಡೋಸ್/ ಬೂಸ್ಟರ್ ಡೋಸ್‌ಗೆ ನೋಂದಣಿ 
          60 ವರ್ಷ ಮೇಲ್ಪಟ್ಟವರು ಬೂಸ್ಟರ್‌ಗೆ ನೋಂದಣಿ ಮಾಡುವ ವಿಧಾನ ಈ ಹಿಂದೆ ಲಸಿಕೆಗಾಗಿ ನೋಂದಣಿ ಮಾಡಿದಂತೆಯೇ ಇದೆ. 60 ವರ್ಷ ಮೇಲ್ಪಟ್ಟವರಾಗಿದ್ದರೆ 2 ನೇ ಡೋಸ್‌ ತೆಗೆದು 9 ತಿಂಗಳಾಗಿದ್ದರೆ (39 ವಾರಗಳು) ಅವರು ಬೂಸ್ಟರ್/ ಪ್ರಿಕಾಷನ್‌ ಡೋಸ್‌ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries