HEALTH TIPS

ನಿಮ್ಮ ಮಗು ಆಕಸ್ಮಿಕವಾಗಿ ಏನನ್ನಾದರೂ ನುಂಗಿದರೆ, ತಕ್ಷಣ ಏನು ಮಾಡಬೇಕು?

        ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಪೋಷಕರ ಸಂಪೂರ್ಣ ಗಮನ ಮಕ್ಕಳ ಚಟುವಟಿಕೆಗಳ ಮೇಲಿರಬೇಕಾಗುತ್ತದೆ. ಏಕೆಂದರೆ, ಸಣ್ಣ ಮಕ್ಕಳು ತಮ್ಮ ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಸಾಮಾನ್ಯವಾಗಿ ಈ ಸಮಸ್ಯೆಯು 1-2 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಏಕೆಂದರೆ ಬೆಳೆಯುತ್ತಿರುವ ವಯಸ್ಸಿನಲ್ಲಿ ಅವರು ಎಲ್ಲವನ್ನೂ ತಮ್ಮ ಬಾಯಿಗೆ ಹಾಕಿಕೊಳ್ಳಲು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳು ಖಾದ್ಯವನ್ನು ತಿಂದರೆ ಯಾವುದೇ ತೊಂದರೆ ಇಲ್ಲ, ಆದರೆ ಗಾಜು, ನಾಣ್ಯ, ಕಬ್ಬಿಣದ ತುಂಡುಗಳು, ರಬ್ಬರ್ ಮತ್ತು ಕೀಟಗಳನ್ನು ಸೇವಿಸಿದರೆ, ಅದು ಮಗುವಿಗೆ ಅಪಾಯಕಾರಿ. ಆದ್ದರಿಂದ ತುಂಬಾ ಜಾಗರೂಕರಾಗಿರಬೇಕು.

       ಆದ್ದರಿಂದ ಇಲ್ಲಿ ನಾವು ನಿಮ್ಮ ಮಗು ಬಾಯಿ ಮತ್ತು ಮೂಗಿನಲ್ಲಿ ಏನನ್ನಾದರೂ ಹಾಕಿಕೊಂಡರೆ, ಏನು ಮಾಡಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

         ಮಗು ಏನಾದರೂ ನುಂಗಿದ್ದರೆ, ಅದನ್ನು ಅರ್ಥಮಾಡಿಕೊಳ್ಳುವುದು ಹೇಗೆ? 

       1. ಬಾಯಿಯಲ್ಲಿ ನಿರಂತರ ಜೊಲ್ಲು ಸುರಿಸುವುದು 

      2. ಮಗು ತಿನ್ನುವಾಗ ಮತ್ತು ಕುಡಿಯುವಾಗ ನೋವು ಅನುಭವಿಸುವುದು

       3. ಉಸಿರಾಟದ ಸಮಯದಲ್ಲಿ ಮಗುವಿನ ಎದೆಯಿಂದ ಉಬ್ಬಸದ ಶಬ್ದ 

      4. ಉಸಿರಾಟದಲ್ಲಿ ತೊಂದರೆ 

       5. ಮಾತನಾಡಲು ಅಥವಾ ಅಳಲು ತೊಂದರೆ 

       6. ಮಗು ಆತಂಕ ಪಡುವುದು 

       7. ಮಗು ಜಡ ತೋರುವುದು

               ನಿಮ್ಮ ಮಗುವಿನ ಬಾಯಿ ಅಥವಾ ಮೂಗಿನಲ್ಲಿ ಏನಾದರೂ ಸಿಕ್ಕಿಹಾಕಿಕೊಂಡರೆ ಏನು ಮಾಡಬೇಕು? 

       ನಿಮ್ಮ ಮಗು ಆಟವಾಡುವಾಗ ಬಾಯಿಗೆ ಏನಾದರೂ ಹಾಕಿಕೊಂಡರೆ ಗಾಬರಿಯಾಗುವ ಅಗತ್ಯವಿಲ್ಲ, ಏಕೆಂದರೆ ಗಾಳಿಯ ಕೊಳವೆಯೊಳಗೆ ಏನಾದರೂ ಹೋದರೆ, ಮಗುವನ್ನು ಕೆಮ್ಮಲು ಮತ್ತು ಅವರ ಬೆನ್ನು ತಟ್ಟಲು ಹೇಳಿ. ಮಗು ತುಂಬಾ ಚಿಕ್ಕದಾಗಿದ್ದರೆ, ಕೆಮ್ಮುವಾಗ ಹೆಚ್ಚು ಬಾರಿ ಬೆನ್ನು ತಟ್ಟಬೇಡಿ ಜೊತೆಗೆ ಕತ್ತಿನ ಭಾಗವನ್ನು ಬಾಗಿಸಿ, ಕೆಮ್ಮಲು ಹೇಳಿ. ನುಂಗಿದ ವಸ್ತುವು ತುಂಬಾ ಚಿಕ್ಕದಾಗಿದ್ದರೆ, ಮೃದುವಾದ ಮತ್ತು ಕಡಿಮೆ ಹಾನಿಕಾರಕವಾಗಿದ್ದರೆ, ಸ್ವಲ್ಪ ಸಮಯ ಕಾಯಬಹುದು. ಇದು ಮಗುವಿನ ದೇಹದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಗಮನಿಸಬಹುದು. ಈ ಸಮಯದಲ್ಲಿ ಮಗುವಿಗೆ ತಿನ್ನಲು ಅಥವಾ ಕುಡಿಯಲು ಏನನ್ನೂ ನೀಡಬೇಡಿ. ಮಗುವಿನ ಆಹಾರ ಪೈಪ್‌ಗೆ ಏನಾದರೂ ಹೋಗಿದ್ದರೆ, ಗಾಬರಿಯಾಗುವ ಅಗತ್ಯವಿಲ್ಲ. ಇದು ಕರುಳಿನ ಮೂಲಕ ಹೋಗಿ, ಎರಡು-ಮೂರು ದಿನಗಳಲ್ಲಿ ಹೊರಬರುತ್ತದೆ. ಇದಲ್ಲದೆ, ಮಗು ಮೂಗು ಅಥವಾ ಕಿವಿಯೊಳಗೆ ಏನಾದರೂ ಹೋಗಿದ್ದರೆ, ಯಾವುದೇ ಅಪಾಯವನ್ನು ತೆಗೆದುಕೊಳ್ಳಬೇಡಿ. ಅಂತಹ ಪರಿಸ್ಥಿತಿಯಲ್ಲಿ, ಮಗುವನ್ನು ತಡಮಾಡದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ.

            ಮುನ್ನೆಚ್ಚರಿಕೆಗಳು: ನಿಮ್ಮ ಮಗು ನುಂಗುವಂತಹ ವಸ್ತುಗಳನ್ನು ಕೈಗೆಟಕುವಂತೆ ಇಡಬೇಡಿ. ಈ ವಿಚಾರದಲ್ಲಿ ತುಂಬಾ ಜಾಗರೂಕರಾಗಿರಬೇಕು. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರ ಮುಂದೆ ಅಥವಾ ನೆಲದ ಮೇಲೆ ಏನನ್ನೂ ಇಡಬೇಡಿ. ವಿಶೇಷವಾಗಿ ಔಷಧಿಗಳು, ನಾಣ್ಯಗಳು ಮತ್ತು ಸೂಜಿಗಳು ಮುಂತಾದವುಗಳು. ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ ನಿಮ್ಮ ಮಗು ಆಟಿಕೆಗಳ ತುಂಡುಗಳನ್ನು ನುಂಗಿದರೆ, ತಡಮಾಡದೆ ವೈದ್ಯರ ಬಳಿಗೆ ಕೊಂಡೊಯ್ಯಿರಿ. ಏಕೆಂದರೆ ಅದು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ, ಡ್ರೈ ಫ್ರೂಟ್ಸ್‌ಗಳಲ್ಲಿ ಕಡಲೆಕಾಯಿ ಮತ್ತು ಬಾದಾಮಿಗಳನ್ನು ನೀಡಬೇಡಿ ಏಕೆಂದರೆ ಅದು ಅವರ ಗಂಟಲಲ್ಲಿ ಸಿಲುಕಿಕೊಳ್ಳಬಹುದು. ಮಗು ಏನಾದರೂ ನುಂಗಿದ್ದರೆ, ಯಾವುದೇ ಮನೆಮದ್ದುಗಳನ್ನು ಮಾಡಬೇಡಿ. ಮಗುವನ್ನು ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಿರಿ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries