HEALTH TIPS

ರಾಜ್ಯದಲ್ಲಿ ಇಂದು 1824 ಮಂದಿಗೆ ಕೋವಿಡ್ ಪತ್ತೆ: 38,929 ಮಾದರಿಗಳ ಪರೀಕ್ಷೆ

               ತಿರುವನಂತಪುರ: ರಾಜ್ಯದಲ್ಲಿ ಇಂದು 1824 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ 374, ಎರ್ನಾಕುಳಂ 292, ಕೋಝಿಕ್ಕೋಡ್ 256, ಕಣ್ಣೂರು 150, ತ್ರಿಶೂರ್ 119, ಮಲಪ್ಪುರಂ 115, ಕೊಲ್ಲಂ 103, ಕೊಟ್ಟಾಯಂ 96, ಪಾಲಕ್ಕಾಡ್ 73, ಇಡುಕ್ಕಿ 70, ಪತ್ತನಂತಿಟ್ಟ 63, ಆಲಪ್ಪುಳ 55, ವಯನಾಡ್ 30, ಕಾಸರಗೋಡು 28 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆÉ. ಕಳೆದ 24 ಗಂಟೆಗಳಲ್ಲಿ 38,929 ಮಾದರಿಗಳನ್ನು ಪರೀಕ್ಷಿಸಲಾಗಿದೆ. 5 ಸ್ಥಳೀಯಾಡಳಿತ ಸಂಸ್ಥೆಗಳ 6 ವಾರ್ಡ್‍ಗಳಲ್ಲಿ ವಾರದ ಸೋಂಕಿನ ಜನಸಂಖ್ಯೆಯ ಅನುಪಾತ 10 ಕ್ಕಿಂತ ಹೆಚ್ಚಿದೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.

                    ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,21,509 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,17,637 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 3,872 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 142 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 22,691 ಕೊರೋನಾ ಪ್ರಕರಣಗಳಲ್ಲಿ, ಕೇವಲ 10 ಶೇ. ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.


                   ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 16 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಪ್ರಕಾರ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 252 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 46,586ಕ್ಕೆ ಏರಿಕೆಯಾಗಿದೆ.

               ಇಂದು ರೋಗ ಪತ್ತೆಯಾದವರಲ್ಲಿ 11 ಮಂದಿ ಹೊರ ರಾಜ್ಯದವರು. 1678 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 1124 ಮಂದಿಯ ಸಂಪರ್ಕ ಮೂಲ  ಸ್ಪಷ್ಟವಾಗಿಲ್ಲ. ಇಂದು ಹನ್ನೊಂದು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ. ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3364 ಮಂದಿ ಜನರು ಗುಣಮುಖರಾಗಿದ್ದಾರೆ. 

                   ತಿರುವನಂತಪುರ 817, ಕೊಲ್ಲಂ 112, ಪತ್ತನಂತಿಟ್ಟ 127, ಆಲಪ್ಪುಳ 157, ಕೊಟ್ಟಾಯಂ 347, ಇಡುಕ್ಕಿ 86, ಎರ್ನಾಕುಳಂ 324, ತ್ರಿಶೂರ್ 261, ಪಾಲಕ್ಕಾಡ್ 90, ಮಲಪ್ಪುರಂ 107, ಕೋಝಿಕ್ಕೋಡ್ 523, ವಯನಾಡ್ 128, ಕಣ್ಣೂರು 228, ಕಾಸರಗೋಡು 57 ಎಂಬಂತೆ ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ 22,691 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 51,65,164 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries