HEALTH TIPS

ಕೇರಳದಲ್ಲಿ 30 ರಂದು ಆಟೋ, ಟ್ಯಾಕ್ಸಿ ಮುಷ್ಕರ

                ಕೊಚ್ಚಿ: ಕೇರಳದಲ್ಲಿ ವಿವಿಧ ಬೇಡಿಕೆ ಮುಂದಿರಿಸಿ ಆಟೋ, ಟ್ಯಾಕ್ಸಿ, ಲೈಟ್ ಮೋಟಾರ್ ಕಾರ್ಮಿಕರು ಡಿ. 30ರಂದು ರಾಜ್ಯವ್ಯಾಪಕವಾಗಿ 24 ತಾಸುಗಳ ಸೂಚನಾ ಮುಷ್ಕರ ನಡೆಸಲಿದ್ದಾರೆ.  ಮೋಟಾರು ಕಾರ್ಮಿಕರ ಸಂಯುಕ್ತ ಮುಷ್ಕರ ಸಮಿತಿ ವತಿಯಿಂದ ಮುಷ್ಕರ ನಡೆಯಲಿರುವುದು.

                    ಆಟೋ-ಟ್ಯಾಕ್ಸಿ ದರ ಪರಿಷ್ಕರಿಸಬೇಕು, ಹಳೇ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಕೆಯಿಂದ ವಿನಾಯಿತಿ ನೀಡಬೇಕು, ವಾಹನಗಳ ಕಾಲಾವಧಿ 20ವರ್ಷ ವರೆಗೆ ಮುಂದೂಡಬೇಕು, ಇ-ಆಟೋಗಳಿಗೆ ಪರ್ಮಿಟ್ ಕಡ್ಡಾಯಗೊಳಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಮುಷ್ಕರ ನಡೆಯಲಿದೆ. ಬೇಡಿಕೆ ಈಡೇರಿಸದಿದ್ದಲ್ಲಿ, ಜನವರಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಮುಷ್ಕರ ಸಮಿತಿ ಕನ್ವೀನರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries