HEALTH TIPS

ಅಮೆರಿಕದಲ್ಲಿ ಸುಂಟರಗಾಳಿ ಅಬ್ಬರ; 80 ಜನರು ಸಾವು

      ವಾಷಿಂಗ್ಟನ್:  ಸುಂಟರಗಾಳಿಯ ಅಬ್ಬರಕ್ಕೆ ಅಮೆರಿಕದ 5 ರಾಜ್ಯಗಳ ಜನರು ತತ್ತರಿಸಿ ಹೋಗಿದ್ದಾರೆ. ಇದುವರೆಗೂ 80 ಜನರು ಮೃತಪಟ್ಟಿದ್ದಾರೆ. "ಅಮೆರಿಕದ ಇತಿಹಾಸದಲ್ಲಿಯೇ ಇದು ಬಹುದೊಡ್ಡ ಸುಂಟರಗಾಳಿ" ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

      ಅರ್ಕಾನ್ಸಾಸ್, ಮಿಸಿಸಿಪ್ಪಿ, ಇಲಿನಾಯ್ಸ್, ಕೆಂಟುಕಿ, ಟೆನ್ನೆಸ್ಸಿ ರಾಜ್ಯಗಳಲ್ಲಿ ಶನಿವಾರ ಸುಂಟರಗಾಳಿಯು ಭಾರೀ ಹಾನಿ ಮಾಡಿದೆ. ಕೆಂಟುಕಿಯಲ್ಲಿಯೇ ಸುಮಾರು 50 ಜನರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಗಾಳಿಯ ಅಬ್ಬರಕ್ಕೆ ಮೇಣದ ಬತ್ತಿ ತಯಾರಿಕಾ ಕಾರ್ಖನೆ ಸಂಪೂರ್ಣ ನಾಶಗೊಂಡಿದೆ.

     ಸುಂಟರಗಾಳಿ ಬೀಸುವಾಗ ಕಾರ್ಖನೆಯಲ್ಲಿ 110 ಜನರು ಕೆಲಸ ಮಾಡುತ್ತಿದ್ದರು. ಗಾಳಿಯ ತೀವ್ರತೆಗೆ ಕಾರ್ಖನೆ ಮೇಲ್ಛಾವಣಿ ಕುಸಿದಿದೆ. 40 ಜನರನ್ನು ಅವಶೇಷಗಳ ಅಡಿಯಿಂದ ರಕ್ಷಣೆ ಮಾಡಲಾಗಿದೆ. ಇನ್ನೂ ಅವಶೇಷಗಳಡಿ ಯಾರಾದರೂ ಬದುಕಿದ್ದರೆ ಅದು ಪವಾಡ ಎಂದು ಅಧಿಕಾರಿಗಳು ಹೇಳಿದ್ದಾರೆ.

    ನಾವು ಅವಶೇಷಗಳಡಿ ಸಿಲಕಿದ್ದೇವೆ. ಮೇಣದ ಬತ್ತಿ ಕಾರ್ಖನೆಯಲ್ಲಿ ನಾವು ಕೆಲಸ ಮಾಡುತ್ತಿದ್ದೆವು. ನಮ್ಮನ್ನು ರಕ್ಷಣೆ ಮಾಡಿ. ನಮ್ಮ ಸಹೋದ್ಯೋಗಿಗಳು ಸಹ ಇಲ್ಲಿ ಸಿಲುಕಿದ್ದಾರೆ" ಎಂದು ಕಾರ್ಖನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಪರಿಚಯಸ್ಥರಿಗೆ ಆಡಿಯೋ ಸಂದೇಶ ಕಳಿಸಿದ್ದಾರೆ.

      ಸುಂಟರಗಾಳಿಯ ಅಬ್ಬರದಿಂದ ಹಾನಿಯಾದ ಹಿನ್ನಲೆಯಲ್ಲಿ ಕೆಂಟುಕಿ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿ ಗವರ್ನರ್ ಆಂಡಿ ಬೆಶಿಯರ್ ಆದೇಶ ಹೊರಡಿಸಿದ್ದಾರೆ. ಅವಶೇಷಗಳಡಿ ಜನರು ಸಿಲುಕಿದ್ದಾರೆಯೇ? ಎಂದು ಹುಡುಕಾಟವನ್ನು ಸಹ ನಡೆಸಲಾಗುತ್ತಿದೆ.

      ಕೆಂಟುಕಿಯ ಇತಿಹಾಸದಲ್ಲಿಯೇ ಇಂತಹ ಸುಂಟರಗಾಳಿ ನೋಡಿಲ್ಲ. ಇಂತಹ ಗಾಳಿಯನ್ನು ನಾನು ಜೀವಮಾನದಲ್ಲೇ ನೋಡಿಲ್ಲ. ಗಾಳಿಯ ತೀವ್ರತೆ ತಿಳಿಸಲು ನನಗೆ ಪದಗಳೇ ಸಿಗುತ್ತಿಲ್ಲ" ಎಂದು ಗವರ್ನರ್ ಆಂಡಿ ಬೆಶಿಯರ್ ಹೇಳಿದ್ದಾರೆ.

     ಇಲಿನಾಯನ್ಸ್‌ನಲ್ಲಿರುವ ಅಮೆಝಾನ್ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 6 ಜನರು ಮೃತಪಟ್ಟಿದ್ದಾರೆ. ಕ್ರಿಸ್‌ಮಸ್ ಹಿನ್ನಲೆಯಲ್ಲಿ ಹೆಚ್ಚಿನ ಆರ್ಡರ್‌ಗಳಿದ್ದ ಕಾರಣ ರಾತ್ರಿ ಪಾಳಿಯಲ್ಲಿ ಹಲವಾರು ಜನರು ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬೀಸಿದ ಸುಂಟರಗಾಳಿ ಅನಾಹುತ ಸೃಷ್ಟಿಸಿದೆ.

      ಪುರಾತನ ಕಟ್ಟಡಗಳಿಗೂ ಸುಂರಟಗಾಳಿಯಿಂದ ಹಾನಿಯಾಗಿದೆ. ಹಲವು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಕಾರು ಸೇರಿದಂತೆ ಇತರ ವಾಹನಗಳು ಮೈದಾನಕ್ಕೆ ಹೋಗಿ ಬಿದ್ದಿವೆ. ಸಾಮಾಜಿಕ ಜಾಲತಾಣದಲ್ಲಿ ಚಂಡಮಾರುತದ ದೃಶ್ಯಗಳು ವೈರಲ್‌ ಆಗುತ್ತಿವೆ.

     ಕೆಲವು ಪ್ರದೇಶಗಳಲ್ಲಿ ಚರ್ಚ್‌ಗೆ ಹಾನಿಯಾಗಿದೆ. ಹಲವಾರು ಕಡೆ ನೀರಿನ ಸಂಪರ್ಕ ಸ್ಥಗಿತಗೊಂಡಿದೆ. ವಿದ್ಯುತ್ ವಿತರಣಾ ವ್ಯವಸ್ಥೆಗೆ ಹಾನಿಯಾಗಿದೆ. ಸುಂಟರಾಳಿಯ ಅಬ್ಬರಕ್ಕೆ ಬಾಂಬ್ ಸ್ಫೋಟದಂತೆ ಅನುಭವವಾಯಿತು ಎಂದು ಕೆಲವು ಜನರು ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ.

    ಗಾಳಿಯ ಅಬ್ಬರಕ್ಕೆ ನಾಲ್ಕು ರಾಜ್ಯಗಳಲ್ಲಿ ಸುಮಾರು 3,31,549 ಗ್ರಾಹಕರು ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಒಟ್ಟು 5 ರಾಜ್ಯಗಳಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.

       ಅರ್ಕಾನ್ಸಾಸ್ ಪ್ರದೇಶದಲ್ಲಿ ಮೊನೆಟ್ ನರ್ಸಿಂಗ್ ಹೋಂಗೆ ಸುಂಟರಗಾಳಿ ಹಾನಿ ಮಾಡಿದೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸುಂಟರಗಾಳಿಯ ಅಬ್ಬರದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries