ಕೊಚ್ಚಿ: ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊರೋನಾ ಬಿಕ್ಕಟ್ಟಿನಿಂದ ಹೊರಬರುತ್ತಿರುವಂತೆ ನಿರ್ಮಾಣ ಸಾಮಗ್ರಿಗಳ ಬೆಲೆಯೂ ತೀವ್ರವಾಗಿ ಏರುತ್ತಿದೆ. ಇದು ಇಡೀ ನಿರ್ಮಾಣ ಕ್ಷೇತ್ರವನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ.
ಕಲ್ಲು, ಸಿಮೆಂಟ್, ಲೋಹದ ಬ್ಲಾಕ್‌ಗಳು, ಇಟ್ಟಿಗೆಗಳು, ತಂತಿ, ಹೆಂಚು, ಪ್ಯೆಪ್ ಗಳು ಮತ್ತು ಬಣ್ಣಗಳ ಬೆಲೆಗಳು ಏರುತ್ತಿವೆ. ಕಚ್ಚಾವಸ್ತುಗಳ ಕೊರತೆಯಿಂದ ಹಣದುಬ್ಬರ ಉಂಟಾಗಿದೆ. ವೈರ್ ಮತ್ತು ಪವರ್ ಕೇಬಲ್‌ಗಳ ಬೆಲೆ ಶೇಕಡಾ 50 ರಷ್ಟು ಹೆಚ್ಚಳಗೊಂಡಿದೆ.




