ಮಂಜೇಶ್ವರ : ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಸತೀಶ್ ಎಲಿಯಾಣ, ಉಪಾಧ್ಯಕ್ಷರಾಗಿ ರಾಜಲಕ್ಷ್ಮಿ ದೇರಂಬಳ ಗುತ್ತು ಅವಿರೋಧವಾಗಿ ಆಯ್ಕೆಯಾದರು. ಸದಸ್ಯರಾಗಿ ಜಯರಾಜ್ ಶೆಟ್ಟಿ ಚಾರ್ಲ, ಪ್ರಫುಲ್ಲ ಕುಮಾರಿ ಪೆÇಯ್ಯೆಲ್, ಅಬ್ದುಲ್ ರಹಿಮಾನ್, ರತ್ನಾಕರ, ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಚಂದ್ರಪ್ರಸಾದ್ ಕರಿಪ್ಪಾರ್, ಹೇಮಲತಾ ಕುಳೂರು, ಸುಪ್ರೀತಾ ಪಾದೆ ಹೊಸಮನೆ, ರೂಪ ಪಾದೆ ಕುಳೂರು, ಪ್ರೇಮ ಜಿ ಶೆಟ್ಟಿ, ಬೇಬಿ ಕುಳೂರು, ಉದಯಕುಮಾರಿ, ನಯನ, ಸುಹಾಸಿನಿ, ಭುಜಂಗ, ಮೋಹನ, ಬಟ್ಯಪ್ಪ, ಬೇಬಿ ಆಯ್ಕೆಯಾದರು.
ಬಳಿಕ ಮಾತೆಯರ ರಕ್ಷಕ ಶಿಕ್ಷಕ ಸಂಘದ ನೂತನ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷೆಯಾಗಿ ಪ್ರಫುಲ್ಲ ಕುಮಾರಿ ಪೊಯ್ಯೆಲ್, ಉಪಾಧ್ಯಕ್ಷೆಯಾಗಿ ಪ್ರೇಮ ಜಿ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು. ಸುಪ್ರೀತಾ ಪಾದೆ ಹೊಸಮನೆ, ರೂಪ ಪಾದೆ ಕುಳೂರು, ಹೇಮಲತಾ ಕುಳೂರು, ಬೇಬಿ ಕೆ, ಉದಯಕುಮಾರಿ, ನಯನ ಕೆ, ಸುಹಾಸಿನಿ, ರಾಜಲಕ್ಷ್ಮಿ ದೇರಂಬಳ ಗುತ್ತು, ಸೌಮ್ಯ ಬಿ, ನಳಿನಾಕ್ಷಿ, ಸುಶೀಲ, ಪದ್ಮಿನಿ, ಪ್ರತಿಭಾ, ಬೇಬಿ, ಭವಾನಿ, ಲೀಲಾವತಿ ಆಯ್ಕೆಯಾದರು.




