HEALTH TIPS

ಹೆತ್ತವರೇ ತಿರಸ್ಕರಿಸಿದರೂ ಧೃತಿಗೆಡದ ಪಂಜಾಬ್ ಸಯಾಮಿಗಳು: ಇವರ ಶ್ರಮದ ಬದುಕು ಎಲ್ಲರಿಗೂ ಸ್ಫೂರ್ತಿ!

           ಅಮೃತಸರ: ಹುಟ್ಟುವಾಗ ಸಹೋದರರು ಬೆಳೆಯುವಾಹ ದಾಯಾದಿಗಳು ಎಂಬ ಮಾತಿದೆ. ಆದರೆ ಈ ಇಬ್ಬರ ವಿಷಯದಲ್ಲಿ ಆ ಮಾತು ಸತ್ಯವಾಗುವುದಿಲ್ಲ.

        ಪಂಜಾಬ್​​ನಲ್ಲಿ ಸಯಾಮಿ ಅವಳಿಗಳು ಈಗ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಒಂದು ಇವರ ಈ ವಿಶೇಷತೆಯಿಂದ ಹೆಸರಾದರೆ ಮತ್ತೊಂದು ಇವರಲ್ಲಿ ಓರ್ವರು ಸರ್ಕಾರಿ ಹುದ್ದೆ ಪಡೆದುಕೊಂಡಿರುವುದು. ಅಮೃತಸರದ ಪಿಂಗಲ್ವಾಡದ ನಿವಾಸಿಗಳಾದ ಸಯಾಮಿ ಅವಳಿಗಳಾದ ಸೋಹ್ನಾ ಮತ್ತು ಮೋಹ್ನಾ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾರೆ.


             ಪಿಂಗಲ್ವಾಡ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡಿರುವ ಇವರು ಬಳಿಕ ಐಟಿಐ ಶಿಕ್ಷಣ ಪಡೆದಿದ್ದಾರೆ. ಸರ್ಕಾರಿ ಹುದ್ದೆಗೆ ಅರ್ಜಿ ಹಾಕಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಮೇಲ್ವಿಚಾರಕ ಕೆಲಸವನ್ನು ಪಡೆದಿದ್ದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

           ಪ್ರಮುಖ ವಿಷಯ ಎಂದರೆ ಈ ಇಬ್ಬರೂ ಕೂಡ ಸರ್ಕಾರಿ ಉದ್ದೋಗ ಪಡೆದಿಲ್ಲ. ಬದಲಾಗಿ ಸೋಹ್ನಾಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ. ಆದರೆ ಮೋಹ್ನಾ ಕೂಡ ಸೋಹ್ನಾನ ಜತೆ ಕೆಲಸಕ್ಕೆ ಹೋಗಬೇಕಿದೆ. ಯಾಕೆಂದರೆ ಇವರಿಬ್ಬರಗೂ ಇರುವುದು ಬಿಡಿಸಲಾಗದ ನಂಟು.

            ಸೋಹ್ನಾ ಮತ್ತು ಮೊಹ್ನಾ ಈ ಬಗ್ಗೆ ಮಾತನಾಡಿ, ಈ ಅವಕಾಶ ಮಾಡಿಕೊಟ್ಟ ಪಂಜಾಬ್ ಸರ್ಕಾರ ಮತ್ತು ತಮಗೆ ಶಿಕ್ಷಣ ನೀಡಿ ಈ ಮಟ್ಟಕ್ಕೆ ಬೆಳೆಸಿದ ಪಿಂಗಲ್ವಾಡ ಸಂಸ್ಥೆಗೆ ಧನ್ಯವಾದ ಎಂದಿದ್ದಾರೆ.

                       ಕಾಲುಗಳು ಮಾತ್ರ ಎರಡು, ಕೈಗಳು ನಾಲ್ಕು, ತಲೆ ಎರಡು:                                                                                ಸಯಾಮಿ ಅವಳಿಗಳಾದ ಸೋಹ್ನಾ ಮತ್ತು ಮೋಹ್ನಾ ಜುಲೈ 14, 2003ರಲ್ಲಿ ಅಮೃತಸರದಲ್ಲಿ ಜನಿಸಿದ್ದಾರೆ. 2 ಹೃದಯ, ಕಿಡ್ನಿ ಮತ್ತು ಸ್ಪೈನಲ್ ಕಾರ್ಡ್‌ಗಳನ್ನು ಹೊಂದಿರುವ ಇವರು, ಕರುಳು, ಮೂತ್ರಕೋಶ ಮತ್ತು ಕಾಲುಗಳನ್ನು ಹಂಚಿಕೊಂಡಿದ್ದಾರೆ.

                ಬಾಲ್ಯದಲ್ಲಿಯೇ ತಮ್ಮ ಪಾಲಕರಿಂದ ತಿರಸ್ಕರಿಸಲ್ಪಪಟ್ಟ ಈ ಸಯಾಮಿ ಅವಳಿ ಸಹೋದರರು ದೆಹಲಿಯ ಅಖಿಲ ಭಾರತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ ಆಶ್ರಯದಲ್ಲಿ ಬೆಳೆದಿದ್ದರು. ಪರಸ್ಪರ ದೇಹಗಳನ್ನು ಬೇರ್ಪಡಿಸುವುದು ಮುಂದಿನ ತೊಂದರೆಗೆ ಆಹ್ವಾನ ಎಂದು ಅರಿತ ವೈದ್ಯರು ಇವರಿಬ್ಬರನ್ನೂ ಒಟ್ಟಿಗೆ ಇರಲು ಬಿಟ್ಟಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries