ಕಾಸರಗೋಡು: ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಕ್ರಿಸ್ ಮಸ್ ಆಚರಣೆ ನಡೆಯಿತು. ವಿದ್ಯಾರ್ಥಿಗಳು ಸಾಂತಾ ಕ್ಲಾಸ್, ಹುಲ್ಲಿನ ಗೋದಲಿ, ನಕ್ಷತ್ರ ದೀಪಗಳ ಅಲಂಕಾರ, ಕ್ಯಾರೋಲ್ ನೃತ್ಯಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಾದ ಶಫೀಕ್ ಮತ್ತು ಖಾದರ್ ಸಾಂತಾಕ್ಲಾಸ್ ತಾತನ ಪಾತ್ರ ನಿರ್ವಹಿಸಿದರು. ವಿದ್ಯಾರ್ಥಿಗಳ ವಿವಿಧ ಕಲಾಪ್ರದರ್ಶನದಿಂದ ಸಂಭ್ರಮಾಚರಣೆ ನಡೆಯಿತು. ಚಿನ್ಮಯ ಕಾಲೇಜು ಪ್ರಾಂಶುಪಾಲ ರಾಘವನ್. ವಿ ನೇತೃತ್ವ ವಹಿಸಿದ್ದರು.




