ಕಾಸರಗೋಡು: ಸಾಮಾಜಿಕ, ಸಾಂಸ್ಕøತಿಕ ಸಂಘಟನೆ ರಂಗಚಿನ್ನಾರಿ ಕಾಸರಗೋಡು ಮತ್ತು ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ಜ. 22 ಮತ್ತು 23ರಂದು ಪಿಲಿಕುಂಜೆಯ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಲಿದೆ.
22ರಂದು ಸಂಜೆ 5.30ಕ್ಕೆ ಶಾಸಕ ಎನ್.ಎ ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸುವರು. ನಗರಸಭಾ ಮಾಜಿ ಅಧ್ಯಕ್ಷ ಎಸ್.ಜೆ ಪ್ರಸಾದ್ ಅಧ್ಯಕ್ಷತೆ ವಹಿಸುವರು. ನಗರಸಭಾ ಅಧ್ಯಕ್ಷ, ವಕೀಲ ವಿ.ಎಂ ಮುನೀರ್, ನಗರಸಭಾ ಸದಸ್ಯೆ ರಂಜಿತಾಮೋಹನ್‍ದಾಸ್ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಬೆಂಗಳೂರಿನ ರಂಗ ಚಂದಿರ ಟ್ರಸ್ಟ್ ಹಾಗೂ ರಂಗಪಯಣ ತಂಡದಿಂದ ರಂಗ ಗೀತೆಗಳ ಗಾಯನ ನಡೆಯುವುದು. ರಾತ್ರಿ 7.45ಕ್ಕೆ ಉಷಾ ಈಶ್ವರ ಭಟ್ ಅವರಿಂದ ದಾಸಕೀರ್ತನೆ ನಡೆಯುವುದು. 23ರಂದು ಸಂಜೆ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನೃತ್ಯಗುರು ಶಶಿಕಲಾ ಟೀಚರ್ ಹಾಗೂ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರನ್ನು ಸನ್ಮಾನಿಸಲಾಗುವುದು.
ಖ್ಯಾತ ಕವಿ ಕೃಷ್ಣಯ್ಯ ಅನಂತಪುರ ಹಾಗೂ ಖ್ಯಾತ ವೈದ್ಯ ಡಾ. ಅನಂತ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಜೆ 6.45ರಿಂದ ಅಕ್ಷತಾ ಬೈಕಾಡಿ ಮತ್ತು ಶಿಷ್ಯವೃಂದದಿಂದ ನೃತ್ಯ-ಕುಂಚ-ವೈಭವ, 7.30ರಿಂದ ಶಂಕರ್ ಶ್ಯಾನುಭಾಗ್ ಅವರಿಂದ ಭಕ್ತಿ-ಭಾವ-ಗೀತೆ ಕಾರ್ಯಕ್ರಮ ಜರುಗಲಿದೆ.




