ಪೆರ್ಲ:ಪೆರ್ಲದಿಂದ ಗಾಳಿಗೋಪುರ ಮೂಲಕ ಏತಡ್ಕ ಸಂಚರಿಸುವ ಲೋಕೋಪಯೋಗಿ ಇಲಾಖೆ ರಸ್ತೆಯ ಅಭಿವೃದ್ಧಿ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಏತಡ್ಕ ಭಾಗಕ್ಕೆ ಸಂಚರಿಸುವವರು ಹಾಗೂ ಇಲ್ಲಿಂದ ಪೆರ್ಲ ಭಾಗಕ್ಕೆ ಆಗಮಿಸುವವರು ಪುತ್ರಕಳ-ಪಳ್ಳತ್ತಡ್ಕ ಹಾದಿಯಾಗಿ ಸಂಚರಿಸುವಂತೆ ಪ್ರಕಟಣೆ ತಿಳಿಸಿದೆ.




