ಕಾಸರಗೋಡು: ಸಮಗ್ರ ಶಿಕ್ಷ ಣ ಕೇರಳದ ಜಿಲ್ಲೆಯ ಆಯ್ದ ಎರಡು ಶಾಲೆಗಳಲ್ಲಿ ಮಾದರಿ ಪೂರ್ವ ಶಾಲಾ ಯೋಜನೆಯ ಅನುಷ್ಠಾನಕ್ಕಾಗಿ ಮೂರು ದಿನಗಳ ಪರಿಕಲ್ಪನೆ ರೂಪಿಸುವ ಕಾರ್ಯಾಗಾರ ಬೇಕಲ ಬಿಆರ್ ಸಿಯಲ್ಲಿ ಆರಂಭವಾಗಿದೆ.
ಸಮಗ್ರ ಶಿಕ್ಷಣ ಕೇರಳ ಜಿಲ್ಲಾ ಯೋಜನಾ ಸಂಯೋಜಕ ಪಿ ರವೀಂದ್ರನ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಜಿಲ್ಲಾ ಕಾರ್ಯಕ್ರಮಾಧಿಕಾರಿ ಕೆ.ಪಿ.ರಂಜಿತ್ ಯೋಜನೆ ಬಗ್ಗೆ ವಿವರಿಸಿದರು. ಕಾಸರಗೋಡು ಉಪಜಿಲ್ಲೆಯ ಜಿ.ಎಚ್.ಎಸ್.ಎಸ್ ಕುಂಗಂಗುಳಿ, ಬೇಕಲ ಉಪಜಿಲ್ಲೆಯ ಜಿಎಲ್‍ಪಿಎಸ್ ಪೆರಿಯ ಶಾಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯು ಪ್ರೀ ಸ್ಕೂಲ್ ಕಾರ್ನರ್ ಗಳು, ಆಟದ ಸಲಕರಣೆಗಳೊಂದಿಗೆ ಆಕರ್ಷಕ ಮಿನಿ ಪಾರ್ಕ್, ಮಕ್ಕಳ ಸ್ನೇಹಿ ಶೌಚಾಲಯಗಳು ಮತ್ತು ಸುಂದರವಾದ ಉದ್ಯಾನವನ್ನು ಒಳಗೊಂಡಿರುತ್ತದೆ. ಸಾರ್ವಜನಿಕ ಶಾಲೆಗಳನ್ನು ಶ್ರೇಷ್ಠತೆಯ ಕೇಂದ್ರಗಳನ್ನಾಗಿ ಮಾಡುವ ಭಾಗವಾಗಿ ಸಮಗ್ರ ಶಿಕ್ಷಾ ಕೇರಳ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಬೇಕಲ ಬಿ.ಪಿ.ಸಿ. ಕೆ.ಎಂ. ದಿಲೀಪ್ ಕುಮಾರ್ ಸ್ವಾಗತಿಸಿ, ಕಾಸರಗೋಡು ಬಿಪಿಸಿ ಟಿ ಪ್ರಕಾಶನ್ ವಂದಿಸಿದರು.




