ಕಾಸರಗೋಡು: ಈ ವರ್ಷದ ಗಣರಾಜ್ಯೋತ್ಸವವನ್ನು ಕೋವಿಡ್ ಮಾನದಂಡಾನುಸಾರ ನಿಯಂತ್ರಣದಲ್ಲಿ ಆಚರಿಸಲಾಗುತ್ತದೆ.
ಗಣರಾಜ್ಯೋತ್ಸವದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಂದರು, ಪುರಾತತ್ವ ಸಚಿವ ಅಹ್ಮದ್ ದೇವÀರ್ಕೋವಿಲ್ ಅವರು ಕಾಸರಗೋಡು ವಿದ್ಯಾನಗರದ ಮುನ್ಸಿಪಲ್ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಮೂರು ತುಕಡಿ ಪೋಲೀಸರು ಮತ್ತು ಒಂದು ತುಕಡಿ ಅಬಕಾರಿ ದಳ ಭಾಗವಹಿಸಲಿದ್ದಾರೆ. ರಿಹರ್ಸಲ್ ಪರೇಡ್ ಜನವರಿ 22,23 ರಂದು ಮಧ್ಯಾಹ್ನ 2 ಗಂಟೆಗೆ ಮತ್ತು 25 ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ. ಕೋವಿಡ್ ಹರಡುವ ಸಂದರ್ಭದಲ್ಲಿ 10 ವರ್ಷದೊಳಗಿನ ಮಕ್ಕಳಿಗೆ ಮುನ್ಸಿಪಲ್ ಸ್ಟೇಡಿಯಂಗೆ ಪ್ರವೇಶವಿರುವುದಿಲ್ಲ. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ನೇತೃತ್ವದ ವೈದ್ಯಕೀಯ ತಂಡವನ್ನು ಕ್ರೀಡಾಂಗಣದಲ್ಲಿ ನಿಯೋಜಿಸಲಾಗುವುದು. ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠ ವೈಭವ್ ಸಕ್ಸೇನಾ, ಸಬ್ ಕಲೆಕ್ಟರ್ ಡಿಆರ್ ಮೇಘಶ್ರೀ, ಆರ್ ಡಿಒ ಅತುಲ್ ಸ್ವಾಮಿನಾಥ್, ಡಿಎಂಒ (ಆರೋಗ್ಯ) ಕೆಆರ್ ರಾಜನ್ ಮತ್ತು ಇತರ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.




