ನವದೆಹಲಿ: ಪಂಚರಾಜ್ಯಗಳ ಚುನಾವಣಾ ಪ್ರಚಾರ ನಿಮಿತ್ತ ರ‍್ಯಾಲಿಗಳು ಮತ್ತು ರೋಡ್‍ಶೋಗಳ ಮೇಲಿನ ನಿಷೇಧವನ್ನು ಜನವರಿ 22 ರವರೆಗೆ ಭಾರತೀಯ ಚುನಾವಣಾ ಆಯೋಗವು ವಿಸ್ತರಿಸಿದೆ.
ಪ್ರಚಾರ ರ‍್ಯಾಲಿಗಳು ಮತ್ತು ರೋಡ್‍ಶೋಗಳಿಗೆ ಈ ಹಿಂದೆ ಜನವರಿ 15ರವರೆಗೆ ಚುನಾವಣಾ ಆಯೋಗ ನಿಷೇಧ ಹೇರಿತ್ತು. ಆದಾಗ್ಯೂ, ಆಯೋಗವು ಗರಿಷ್ಠ 300 ವ್ಯಕ್ತಿಗಳೊಂದಿಗೆ ಅಥವಾ ಸಭಾಂಗಣದ ಸಾಮಥ್ರ್ಯದ ಶೇಕಡಾ 50 ರಷ್ಟು ಒಳಾಂಗಣ ಸಭೆಗಳಿಗೆ ಅನುಮತಿ ನೀಡಿದೆ.
ಆದಾಗ್ಯೂ, ರಾಜಕೀಯ ಪಕ್ಷಗಳಿಗೆ ಗರಿಷ್ಟ 300 ವ್ಯಕ್ತಿಗಳು ಅಥವಾ ಸಭಾಂಗಣದ ಸಾಮರ್ಥ್ಯದ 50% ಅಥವಾ ಎಸ್‍ಡಿಎಂಎ ನಿಗದಿಪಡಿಸಿದ ನಿಗದಿತ ಮಿತಿಯ ಒಳಾಂಗಣ ಸಭೆಗಳನ್ನು ನಡೆಸಲು ಅನುಮತಿ ನೀಡಿದೆ.
ಫೆಬ್ರವರಿ 10 ರಿಂದ ಉತ್ತರಪ್ರದೇಶ, ಮಣಿಪುರ, ಗೋವಾ, ಪಂಜಾಬ್, ಉತ್ತರಖಂಡ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಪ್ರಾರಂಭವಾಗಲಿದೆ. ಮಾರ್ಚ್ 10 ರಂದು ಮತಎಣಿಕೆ ನಡೆಯಲಿದೆ.




