ತಿರುವನಂತಪುರ: ರಾಜ್ಯದಲ್ಲಿ ನಿನ್ನೆ 49 ಓಮಿಕ್ರಾನ್ ಸೋಂಕಿತರನ್ನು ಪತ್ತೆಹಚ್ಚಲಾಗಿದೆ. ಸಂಪರ್ಕದ ಮೂಲಕ ಹತ್ತು ಮಂದಿಗೆ ಸೋಂಕು ತಗುಲಿದೆ. ತ್ರಿಶೂರ್ 10, ಕೊಲ್ಲಂ 8, ಎರ್ನಾಕುಳಂ 7, ಮಲಪ್ಪುರಂ 6, ಆಲಪ್ಪುಳ ಪಾಲಕ್ಕಾಡ್ ಜಿಲ್ಲೆಗಳು ತಲಾ 3, ಕೋಝಿಕ್ಕೋಡ್ ಮತ್ತು ಕಾಸರಗೋಡು ತಲಾ 2, ತಿರುವನಂತಪುರ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಕಣ್ಣೂರು ಮತ್ತು ವಯನಾಡ್ ತಲಾ ಒಂದುಎಂಬಂತೆ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 230ಕ್ಕೆ ಏರಿಕೆಯಾಗಿದೆ.
ತ್ರಿಶೂರ್‍ನಲ್ಲಿ, ನಾಲ್ವರು ಯುಎಇಯಿಂದ ಮತ್ತು ತಲಾ ಒಬ್ಬರು ಕತಾರ್ ಮತ್ತು ಉಕ್ರೇನ್‍ನಿಂದ ಬಂದವರು. ಕೊಲ್ಲಂನಲ್ಲಿ ಯುಎಇಯಿಂದ ನಾಲ್ವರು, ಕತಾರ್‍ನಿಂದ ಇಬ್ಬರು, ಕೆನಡಾದಿಂದ ಒಬ್ಬರು, ಎರ್ನಾಕುಳಂನಿಂದ ಇಬ್ಬರು, ಯುಕೆಯಿಂದ ಇಬ್ಬರು, ಯುಎಸ್‍ಎಯಿಂದ ಒಬ್ಬರು ಮತ್ತು ಯುಎಇಯಿಂದ ತಲಾ ಒಬ್ಬರು ಬಂದಿದ್ದಾರೆ. ಮಲಪ್ಪುರಂನಲ್ಲಿ, ನಾಲ್ವರು ಯುಎಇಯಿಂದ, ಅಲಪ್ಪುಳದಲ್ಲಿ ಯುಎಇಯಿಂದ ಇಬ್ಬರು, ಸ್ಪೇನ್‍ನಿಂದ ಒಬ್ಬರು, ಪಾಲಕ್ಕಾಡ್‍ನಿಂದ ಇಬ್ಬರು, ಕತಾರ್‍ನಿಂದ ಒಬ್ಬರು, ಕೋಯಿಕ್ಕೋಡ್‍ನಿಂದ ಒಬ್ಬರು ಮತ್ತು ಯುಕೆ ಮತ್ತು ಯುಎಸ್ ನಿಂದ ತಲಾ ಒಬ್ಬರು. ಕಾಸರಗೋಡಲ್ಲಿ ಯುಎಇಯಿಂದ ಆಗಮಿಸಿದ 2 ಮಂದಿಗೆ ಸೋಂಕು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ. ತಿರುವನಂತಪುgದಲ್ಲಿÀ ಒಬ್ಬರು ಯುಎಇಯಿಂದ ಬಂದವರಿಗೆ,ಪತ್ತನಂತಿಟ್ಟದಲ್ಲಿ ಕತಾರ್ ನಿಂದ ಬಂದ ಒಬ್ಬರು, ಕತಾರ್‍ನಿಂದ ಕೊಟ್ಟಾಯಂಗೆ ಬಂದ ಒಬ್ಬರು, ಕತಾರ್‍ನಿಂದ ಇಡುಕ್ಕಿಗೆ ಬಂದ ಒಬ್ಬರಿಗೆ, ಯುಎಇಯಿಂದ ಕಣ್ಣೂರು ಮತ್ತು ಯುಎಸ್‍ಎಯಿಂದ ವಯನಾಡ್ ಗೆ ಬಂದ ಒಬ್ಬೊಬ್ಬರಿಗೆ ಸೋಂಕು ಬಾಧಿಸಿದೆ.
ಇವುಗಳಲ್ಲಿ 32 ಕಡಿಮೆ ಅಪಾಯದ ದೇಶಗಳಿಂದ ಮತ್ತು 7 ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು. ಸಂಪರ್ಕದ ಮೂಲಕ ಸುಮಾರು 10 ಜನರು ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ. ತ್ರಿಶೂರ್ 4, ಕೊಲ್ಲಂ 3, ಮಲಪ್ಪುರಂ 2 ಮತ್ತು ಎರ್ನಾಕುಳಂನಲ್ಲಿ ಒಬ್ಬ ವ್ಯಕ್ತಿ ಸಂಪರ್ಕದ ಮೂಲಕ ಓಮಿಕ್ರಾನ್ ಬಾಧೆಗೊಳಗಾಗಿದ್ದಾರೆ.




