HEALTH TIPS

ದೇಶದಲ್ಲಿ ಒಂದೇ ದಿನ 94 ಹೊಸ ಓಮಿಕ್ರಾನ್ ಸೋಂಕು ಪ್ರಕರಣ ಪತ್ತೆ; ಒಟ್ಟಾರೆ ಸಂಖ್ಯೆ 1,525ಕ್ಕೆ ಏರಿಕೆ

      ನವದೆಹಲಿ: ಜಗತ್ತಿನಾದ್ಯಂತ ವ್ಯಾಪಕ ಭೀತಿ ಸೃಷ್ಟಿಸಿರುವ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ಆರ್ಭಟ ನಿಧಾನವಾಗಿ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 94 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಒಟ್ಟು ಓಮಿಕ್ರಾನ್ ಸೋಂಕಿತರ ಸಂಖ್ಯೆ 1,525ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

       ಈ ಬಗ್ಗೆ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಭಾನುವಾರ ಭಾರತದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1,525ಕ್ಕೇರಿದೆ. ಈ ಪೈಕಿ 560 ಚೇತರಿಸಿಕೊಂಡಿದ್ದು, ಹಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಿದೆ.

      ಒಟ್ಟಾರೆ ಓಮಿಕ್ರಾನ್ ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಇದುವರೆಗೆ ಅತಿ ಹೆಚ್ಚು 60 ಪ್ರಕರಣಗಳು ವರದಿಯಾಗಿದ್ದು, ದೆಹಲಿ (351) ಮತ್ತು ಗುಜರಾತ್ (136) ನಂತರದ ಸ್ಥಾನದಲ್ಲಿವೆ.

      ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿರುವ ಇತರ ರಾಜ್ಯಗಳೆಂದರೆ ಕೇರಳ 109, ರಾಜಸ್ಥಾನ 69, ತೆಲಂಗಾಣ 62, ಹರಿಯಾಣ 37, ಕರ್ನಾಟಕ 34 ಪ್ರಕರಣಗಳು ವರದಿಯಾಗಿವೆ.

     ಅಂತೆಯೇ ಆಂಧ್ರಪ್ರದೇಶ 17, ಪಶ್ಚಿಮ ಬಂಗಾಳ 17, ಒಡಿಶಾ 14, ಮಧ್ಯಪ್ರದೇಶ 9, ಉತ್ತರಪ್ರದೇಶ 8, ಉತ್ತರಾಖಂಡ 4, ಚಂಡೀಗಢ 3, ಜಮ್ಮು ಮತ್ತು ಕಾಶ್ಮೀರ 3, ಅಂಡಮಾನ್ ನಿಕೋಬಾರ್ 2, ಗೋವಾ, ಹಿಮಾಚಲಪ್ರದೇಶ, ಲಡಾಖ್, ಮಣಿಪುರ, ಪಂಜಾಬ್ ನಲ್ಲಿ ತಲಾ ಒಂದು ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

      ಏತನ್ಮಧ್ಯೆ, ಭಾರತವು ಕಳೆದ 24 ಗಂಟೆಗಳಲ್ಲಿ 27,553 ಹೊಸ COVID-19 ಪ್ರಕರಣಗಳನ್ನು ವರದಿ ಮಾಡಿದ್ದು ಸಕ್ರಿಯ ಪ್ರಕರಣಗಳು ಪ್ರಸ್ತುತ 1,22,801ಕ್ಕೇರಿದೆ.


    Post a Comment

    0 Comments
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
    Qries