ಮಂಜೇಶ್ವರ : ಬಂಗ್ರ ಮಂಜೇಶ್ವರ ಶ್ರೀಕಾಳಿಕಾಪರಮೇಶ್ವರೀ ದೇವಸ್ಥಾನದಲ್ಲಿ ಧನುರ್ಮಾಸ ಪೂಜೆಯು ಶುಕ್ರವಾರ ಬೆಳಗ್ಗೆ ಮಕರ ಸಂಕ್ರಾಂತಿಯ ಪ್ರಯುಕ್ತ ವಿಶೇಷ ದೀಪೆÇೀತ್ಸವದ ಅಲಂಕಾರದಲ್ಲಿ ನಡೆಯಿತು. ಪ್ರಾತಃ ಕಾಲ ಓಜ ಸಾಹಿತ್ಯ ಕೂಟದ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ 6.17 ರ ಸೂರ್ಯೋದಯದ ವೇಳೆ ಸೇರಿದ ಭಕ್ತರು ಸುಮಾರು 2000ಕ್ಕೂ ಅಧಿಕ ದೀಪಗಳನ್ನು ಬೆಳಗಿಸುವ ಮೂಲಕ ದೀಪೆÇೀತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಅಲಂಕೃತವಾದ ತಾಯಿ ಶ್ರೀ ಕಾಳಿಕಾಪರಮೇಶ್ವರಿಗೆ ವಿಶೇಷ ದೀಪೆÇೀತ್ಸವದ ಪೂಜೆಯು ಜರಗಿತು.
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಧನುರ್ಮಾಸ ಪೂಜೆ ಶುಕ್ರವಾರ ಬೆಳಗ್ಗೆ ವಿಶೇಷ ದೀಪೆÇೀತ್ಸವದೊಂದಿಗೆ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿಗಳಾದ ಉಮೇಶ ತಂತ್ರಿ ಮಂಗಳೂರು, ಪ್ರಧಾನ ಅರ್ಚಕ ಪ್ರಕಾಶ್ಚಂದ್ರ ಶ್ರೌತಿ ಇವರಿಂದ ಪೂಜಾ ಕೈಂಕರ್ಯಗಳು ನಡೆಯಿತು. ಈ ವೇಳೆ ಕ್ಷೇತ್ರಾಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಓಜ ಸಾಹಿತ್ಯ ಕೂಟ, ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘ, ಶ್ರೀ ಗುರು ಸೇವಾ ಪರಿಷತ್‍ನ ಪದಾಧಿಕಾರಿಗಳು ಸದಸ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು. ಪೂಜೆಯ ಬಳಿಕ ಪ್ರಸಾದ ವಿತರಣೆ, ಫಲಹಾರ ನಡೆಯಿತು.




