ಮುಳ್ಳೇರಿಯ: ಜಿಲ್ಲಾ ಕ್ರೀಡಾ ಪರಿಷತ್ತು, ಕಯ್ಯೂರು ಇ.ಕೆ.ನಾಯನಾರ್ ಕ್ಲಬ್ ಸಹಯೋಗದಲ್ಲಿ ಜಿಲ್ಲಾ ಮಿನಿ ವಾಲಿಬಾಲ್ ಚಾಂಪಿಯನ್ ಶಿಪ್ ಕಯ್ಯೂರಿನಲ್ಲಿ ಆಯೋಜಿಸಲಾಗಿತ್ತು. ಶಾಸಕ ಎಂ ರಾಜಗೋಪಾಲನ್ ಉದ್ಘಾಟಿಸಿದರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ. ಹಬೀಬ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಉಪಾಧ್ಯಕ್ಷ ಪಿ.ಪಿ. ಅಶೋಕನ್, ಜಿಲ್ಲಾ ಕ್ರೀಡಾ ಮಂಡಳಿಯ ಕಾರ್ಯಕಾರಿ ಸದಸ್ಯರಾದ ಅನಿಲ್ ಬಂಗಳಂ ಮತ್ತು ಟಿ.ವಿ.ಕೃಷ್ಣನ್, ಸಂಘಟನಾ ಸಮಿತಿ ಸದಸ್ಯ ರವೀಂದ್ರನ್ ಕೈಯೂರ್, ವಿ.ಕೆ.ರಾಜೇಶ್, ಪ್ರಮೋದ್, ಚಂದ್ರವಯಲ್ ಚಂದ್ರನ್ ಮಾತನಾಡಿದರು. ಎಂ. ರಾಜೀವ್ ಸ್ವಾಗತಿಸಿ, ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯದರ್ಶಿ ಸುದೀಪ್ ಬೋಸ್ ಎಂ.ಎಸ್. ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಕೈಯೂರು ಚೀಮೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ. ವಲ್ಸಲನ್ ವಿಜೇತರಿಗೆ ಬಹುಮಾನ ವಿತರಿಸಿದರು.




