ಕಾಸರಗೋಡು|: ಪ್ರಧಾನಮಂತ್ರಿ ಮತ್ಸ್ಯ ಸಬಾದ ಯೋಜನಾ(ಪಿಎಂಎಂಎಸ್‍ವೈ)ಅನ್ವಯ ಮೀನುಗಾರಿಕಾ ಇಲಾಖೆ ಆವಿಷ್ಕರಿಸಿ ಜಾರಿಗೊಳಿಸುತ್ತಿರುವ ಸಾಗರಮಿತ್ರ ಯೋಜನೆಗೆ ಕೊಯಿಪ್ಪಾಡಿ, ಕೋಟಿಕುಳಂ, ಕೀಯೂರ್, ಕಡಂಕೋಡ್, ಅಜನೂರ್ ಮತ್ಸ್ಯ ಗ್ರಾಮಗಳಿಗೆ ಸಾಗರ ಮಿತ್ರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು. ಆಯ್ಕೆಯಾದವರಿಗೆ ಪ್ರತಿ ತಿಂಗಳು 15ಸಾವಿರ ರೂ. ಗೌರವಧನ ಲಭಿಸಲಿದೆ.
ಫಿಶರೀಸ್ ಸಯನ್ಸ್, ಮೆರೈನ್ ಬಯಾಲಜಿ, ಜುವೊಲಜಿ ಎಂಬಿವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಪಡೆದ ಫಿಶರೀಸ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು 36ವರ್ಷ ಪ್ರಾಯದೊಳಗಿನವರಾಗಿದ್ದು, ಮತ್ಸ್ಯಗ್ರಾಮ ಅಥವಾ ಸನಿಹದ ಪ್ರದೇಶದಲ್ಲಿ ವಾಸ್ತವ್ಯ ಹೊಂದಿದವರಾಗಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿದ್ದು, ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸಲು ಅರಿತಿರಬೇಕು. ಸೇರ್ಪಡೆಗೊಳ್ಳಲಿಚ್ಛಿಸುವವರು ಜ. 25ರ ಮುಂಚಿತವಾಗಿ ಅಗತ್ಯ ದಾಖಲೆಗಳೊಂದಿಗೆ ಕಾಞಂಗಾಡಿನಲ್ಲಿರುವ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು. 29ರಂದು ಬೆಳಗ್ಗೆ 11ಕ್ಕೆ ಇದೇ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04672202537)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




