ಕಾಸರಗೋಡು: ಕಣ್ಣೂರು-ಶೋರ್ನೂರ್ ಮೆಮು, ತಿರುವನಂತಪುರ-ಕಣ್ಣೂರು ಜನಶತಾಬ್ದಿ ಎಕ್ಸ್‍ಪ್ರೆಸ್, ಆಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್, ಎರ್ನಾಕುಳಂ-ಕಣ್ಣೂರು ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲುಗಳಸಂಚಾರವನ್ನು ಮಂಗಳೂರು ವರೆಗೆ ವಿಸ್ತರಿಸುವಂತೆ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜಿಲ್ಲೆಯ ವಿವಿಧ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಸಂಬಂಧಿಸಿ ದ. ರೈಲ್ವೆ ಮಹಾಪ್ರಬಂಧಕರು ಆಯೋಜಿಸಿದ್ದ ಪಾಲಕ್ಕಾಡ್ ಡಿವಿಶನ್ ವ್ಯಾಪ್ತಿಯಲ್ಲಿ ಬರುವ ಸಂಸದರ ಸಭೆಯಲ್ಲಿ ಈ ಬೇಡಿಕೆ ಮುಂದಿರಿಸಿದ್ದಾರೆ. ಕಾಸರಗೋಡು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ವಿವಿಧ ರೈಲ್ವೆ ನಿಲ್ದಾಣಗಳಿಗೆ ಸಂಬಂಧಿಸಿದ ದೂರುಗಳು, ಸಮಸ್ಯೆಗಳು, ಬೇಡಿಕೆಗಳು, ರೈಲುಗಳ ನಿಲುಗಡೆ ಬಗೆಗಿನ ಪ್ರಸ್ತಾವನೆಯನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಈ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಮನವಿ ಮಾಡಿದರು.




