ಉಪ್ಪಳ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇದರ ಕೇರಳ ರಾಜ್ಯ ಶಾಖೆಯ ಉದ್ಘಾಟನಾ ಸಮಾರಂಭ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಗಾಯತ್ರಿ ಮಂಟಪದಲ್ಲಿ ನಡೆಯಿತು.
ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಎಸ್.ವಿ. ಭಟ್ ಉದ್ಘಾಟಿಸಿದರು. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇದರ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಾಕುಂಚ ಗಡಿನಾಡ ಘಟಕ ಕೇರಳ ರಾಜ್ಯ ಶಾಖೆಯ ನೂತನ ಅಧ್ಯಕ್ಷೆ ಜಯಲಕ್ಷ್ಮೀ ಕಾರಂತ್ ಮಂಗಲ್ಪಾಡಿ, ಗೌರವಾಧ್ಯಕ್ಷ ವಿ.ಬಿ ಕುಳಮರ್ವ, ಲೊಕೇಶ್, ಕಲಾಕುಂಚ ಮಹಿಳಾ ವಿಭಾಗ, ದಾವಣಗೆರೆ ಇದರ ಸಂಸ್ಥಾಪಕಿ ಜ್ಯೋತಿ ಗಣೇಶ್ ಶಣೈ, ಕಲಾಕುಂಚ ಮಹಿಳಾ ಘಟಕ ದಾವಣಗೆರೆ, ಕರ್ನಾಟಕ ಅಧ್ಯಕ್ಷೆ ಹೇಮ ಶಾಂತಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ದೇವಕಾನ ಶ್ರೀಕೃಷ್ಣ ಭಟ್ ರವರ ಶಿಷ್ಯವೃಂದದವರಿಂದ ಯಕ್ಷಗಾನ ಪೂರ್ವರಂಗ ಹಾಗೂ ತಿರುವಾದಿರ ನೃತ್ಯ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕೋಲಾಟ, ಭರತ ನಾಟ್ಯ, ಜೈ ಕರ್ನಾಟಕ ಮಾತೆ ಪ್ರಹಸನ ನಡೆಯಿತು. ಸಂಸ್ಥೆಯ ಉಪಾಧ್ಯಾಕ್ಷ ಬಿ.ರಾಜರಾಮ ರಾವ್ ನಿರೂಪಿಸಿದರು.ಜಯಲಕ್ಷ್ಮೀ ಕಾರಂತ್ ಸ್ವಾಗತಿಸಿ, ಕಾರ್ಯದರ್ಶಿ ಕಾರ್ತಿಕ್ ಪಡ್ರೆ ವಂದಿಸಿದರು.




