HEALTH TIPS

ಲಸಿಕೆ ಪಡೆಯದವರಿಗೂ ಓಮಿಕ್ರಾನ್ ಸೋಂಕು ಬಾಧಿಸುವ ತೀವ್ರತೆ ಕಡಿಮೆ!

          ನವದೆಹಲಿ: ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಕೋವಿಡ್-19, ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ನಡುವೆ ಸಮಾಧಾನಕರ ಅಂಶವೊಂದು ಬೆಳಕಿಗೆ ಬಂದಿದೆ.

      ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಧ್ಯಯನ ವರದಿಯೊಂದರ ಪ್ರಕಾರ ಕೋವಿಡ್-19 ಲಸಿಕೆ ಪಡೆಯದೇ ಇರುವವರಿಗೂ ಓಮಿಕ್ರಾನ್ ಸೋಂಕು ತಗುಲಿದರೆ ಅದು ಕಡಿಮೆ ತೀವ್ರತೆಯಲ್ಲಿ ಬಾಧಿಸುತ್ತದೆ ಎಂದು ತಿಳಿದುಬಂದಿದೆ. ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಸಂಸ್ಥೆ ಈ ಅಧ್ಯಯನ ವರದಿಯನ್ನು ಪ್ರಕಟಿಸಿದ್ದು, ಲಸಿಕೆ ಪಡೆಯದ ಮಂದಿಗೆ ಒಂದು ವೇಳೆ ವೇಗವಾಗಿ ಹರಡುತ್ತಿರುವ ಓಮಿಕ್ರಾನ್ ಸೋಂಕು ತಗುಲಿದರೆ ಈ ಹಿಂದಿನ ರೂಪಾಂತರಿಗಳಿಗೆ ಹೋಲಿಕೆ ಮಾಡಿದರೆ ರೋಗದ ತೀವ್ರತೆ ಕಡಿಮೆಯೇ ಇರುವ ಸಾಧ್ಯತೆ ಇದ್ದು, ಆಸ್ಪತ್ರೆ ಸೇರುವುದು ಅಥವಾ ಸಾವು ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

        ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ರೂಪಾಂತರಿಯ ಮೂಲಕ 4 ನೇ ಅಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದವು. ಈಗ ಕಡಿಮೆಯಾಗುತ್ತಿದೆ. ಈ ಅಧ್ಯಯನ ವರದಿಯಲ್ಲಿ ಕೋವಿಡ್-19 ನ ಮೊದಲ ಮೂರು ಅಲೆಗಳಲ್ಲಿ ಬಾಧಿಸಲ್ಪಟ್ಟಿದ್ದ 11,609 ಮಂದಿಯನ್ನು ಈಗ 4ನೇ ಅಲೆಯಲ್ಲಿ ಓಮಿಕ್ರಾನ್ ಪೀಡಿತ 5,144 ಮಂದಿಯೊಂದಿಗೆ ಹೋಲಿಕೆ ಮಾಡಲಾಗಿದೆ.

        ಸಂಶೋಧಕರಿಗೆ ಈ ಅಧ್ಯಯನ ವರದಿಯಲ್ಲಿ ಓಮಿಕ್ರಾನ್ ಅಲೆಯಲ್ಲಿ ಕೋವಿಡ್-19 ಸೋಂಕು ತಗುಲಿಸಿಕೊಂಡವರ ಪೈಕಿ ಶೇ.8 ರಷ್ಟು ಮಂದಿ ಪಾಸಿಟೀವ್ ವರದಿ ಪಡೆದ 14 ದಿನಗಳ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಅಥವಾ ಸಾವನ್ನಪ್ಪಿದ್ದರು. ಆದರೆ ಈ ಪ್ರಮಾಣ ಮೊದಲ ಮೂರು ಅಲೆಗಳಲ್ಲಿ ಶೇ.16.5 ರಷ್ಟಿತ್ತು ಎಂದು ದಕ್ಷಿಣ ಆಫ್ರಿಕಾ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries