ನವದೆಹಲಿ: ಇನ್ನು ಮುಂದೆ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನವಾಗಿ ಆಚರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 150 ಕ್ಕೂ ಹೆಚ್ಚು ಸ್ಟಾರ್ಟ್‍ಅಪ್‍ಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಅಮೃತ್ ಮಹೋತ್ಸವವು ಒಂದು ವಾರ ನಡೆಸುವ “ಸೆಲೆಬ್ರೇಟಿಂಗ್ ಇನ್ನೋವೇಶನ್ ಎಕೋಸಿಸ್ಟಮ್” ಸಮಾರಂಭ. ಈ ಕಾರ್ಯಕ್ರಮವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಜನವರಿ 10 ರಿಂದ 16 ರವರೆಗೆ ಆಯೋಜಿಸುತ್ತಿದೆ.
ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವು ಸ್ಟಾರ್ಟ್‍ಅಪ್ ಇಂಡಿಯಾದ 6ನೇ ವಾರ್ಷಿಕೋತ್ಸವವಾಗಿದೆ. ಕೇಂದ್ರ ಸರ್ಕಾರ ಇದರ ನೇತೃತ್ವ ವಹಿಸಿದ್ದು, ಸ್ಟಾರ್ಟ್‍ಅಪ್ ಸಂಸ್ಕೃತಿಯನ್ನು ವೇಗಗೊಳಿಸಲು ಮತ್ತು ಬಲವಾದ ಮತ್ತು ಅಂತರ್ಗತ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಪ್ರಾರಂಭಿಸಲಾಗಿದೆ.
ಕೃಷಿ, ಆರೋಗ್ಯ, ಉದ್ಯಮ ವ್ಯವಸ್ಥೆಗಳು, ಬಾಹ್ಯಾಕಾಶ, ಕೈಗಾರಿಕೆ 4.0, ಭದ್ರತೆ, ಫಿನ್‍ಟೆಕ್ ಮತ್ತು ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳ ಸ್ಟಾರ್ಟ್‍ಅಪ್‍ಗಳು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂವಾದದಲ್ಲಿ ಭಾಗಿಯಾಗಿದ್ದವು.




