HEALTH TIPS

ಮದುವೆಯ ಮಧುರ ಮೊದಲ ರಾತ್ರಿಯನ್ನು ಲಾಕಪ್ ನಲ್ಲಿ ಕಳೆದ ನವದಂಪತಿ!

             ಅಹಮದಾಬಾದ್: ಗುಜರಾತ್‌ನ ವಲ್ಸಾದ್ ನಗರದಲ್ಲಿ ನವವಿವಾಹಿತ ದಂಪತಿಗಳು ತಮ್ಮ ಮೊದಲ ರಾತ್ರಿಯನ್ನು ಲಾಕಪ್‌ನಲ್ಲಿ ಕಳೆದ ಅಚ್ಚರಿಯ ಘಟನೆ ನಡೆದಿದೆ.

            ಮದುವೆ ಮುಗಿಸಿಕೊಂಡು ನವದಂಪತಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಅವರ ಜೊತೆ ಕುಟುಂಬದ ಇತರ ಸದಸ್ಯರೂ ಇದ್ದರು. ಆದರೆ ಮಾರ್ಗಮಧ್ಯೆ ಪೊಲೀಸರು ಅವರ ಕಾರನ್ನು ನಿಲ್ಲಿಸಿದ್ದರು. 

              ಕೊರೊನಾ ಮಾರ್ಗಸೂಚಿ ಪಾಲನೆ ಕುರಿತಾಗಿ ತಪಾಸಣೆ ನಡೆಸಲಾಗಿ ಕೊರೊನಾ ನಿಯಮ ಉಲ್ಲಂಘನೆ ಗಮನಕ್ಕೆ ಬಂಡಿತ್ತು. ಕೊರೊನಾ ನಿಯಮಾವಳಿ ಪಾಲಿಸದ ಕಾರಣ ಪೊಲೀಸರು ನವದಂಪತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. 

           ನವದಂಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾಕಪ್ ಗೆ ಹಾಕಿದ್ದಾರೆ. ಹೀಗಾಗಿ ಮದುವೆಯ ಮೊದಲ ರಾತ್ರಿಯನ್ನು ಪತಿ-ಪತ್ನಿ ಇಬ್ಬರೂ ಲಾಕಪ್ನಲ್ಲಿ ಕಳೆಯಬೇಕಾಯಿತು. ಮರುದಿನ ಜಾಮೀನಿನ ಮೇರೆಗೆ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ.

            ಪೊಲಿಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಕಾರು ತಪಾಸಣೆ ವೇಳೆ ವರ, ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲದೆ ತಮ್ಮೊಡನೆ ಅನುಚಿತವಾಗಿ ನಡೆದುಕೊಂಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries