ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಂಗರಕ್ಷಕ ಕಮಾಂಡೆಂಟ್ ನ ಕಪ್ಪು ಕುದುರೆ ವಿರಾಟ್ ತನ್ನ ಸೇವೆಯಿಂದ ನಿವೃತ್ತಿ ಹೊಂದಿದ್ದು, ಬುಧವಾರ 73ನೇ ಗಣರಾಜ್ಯೋತ್ಸವ ಪರೇಡ್ ನ ನಂತರ ಬೀಳ್ಕೊಡಲಾಯಿತು.
ರಾಷ್ಟ್ರಪತಿಗಳ ಅಂಗರಕ್ಷಕ ಕಮಾಂಡೆಂಟ್ ಕರ್ನಲ್ ಅನುಪ್ ತಿವಾರಿ ಅವರ ಒಡನಾಟ, ಆರೈಕೆ, ಸಾರಥ್ಯದಲ್ಲಿದ್ದ ಕಪ್ಪು ಕುದುರೆ ವಿರಾಟ್ ಅನ್ನು ಗಣರಾಜ್ಯೋತ್ಸವದ ಪರೇಡ್ ಗಳಲ್ಲಿ 13 ಬಾರಿ ಭಾಗವಹಿಸಿದ್ದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆರವಣಿಗೆಯ ನಂತರ ಭವ್ಯವಾದ ಕುದುರೆಯನ್ನು ತಟ್ಟಿ ಬೀಳ್ಕೊಟ್ಟರು. ಜನವರಿ 15 ರಂದು ಸೇನಾ ದಿನದ ಮುನ್ನಾ ದಿನದಂದು ವಿರಾಟ್‌ಗೆ ಸೇನಾ ಮುಖ್ಯಸ್ಥರು ಶ್ಲಾಘಿಸಿದರು. ಅಸಾಧಾರಣ ಸೇವೆ ಮತ್ತು ಸಾಮರ್ಥ್ಯಗಳಿಗಾಗಿ ಪ್ರಶಂಸೆಯನ್ನು ಪಡೆದ ಮೊದಲ ಕುದುರೆ ವಿರಾಟ್.




