ಕೋಝಿಕ್ಕೋಡ್: ಪ್ರೀತಿಯ ಬಗ್ಗೆ ವೈಯಕ್ತಿಕ ಸ್ವಾತಂತ್ರ್ಯ ಏನು ಎಂಬ ಬಗ್ಗೆ ಅರಿವಿಲ್ಲದ ಯುವ ಪೀಳಿಗೆ ಬೆಳೆಯುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನ್ಯಾಯವಾದಿ ಪಿ ಸತಿದೇವಿ ಹೇಳಿದರು. ಇತ್ತೀಚಿನ ಘಟನೆಗಳು ಇದನ್ನು ಸಾಬೀತುಪಡಿಸುತ್ತವೆ ಎಂದು ಸತಿದೇವಿ ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ನಿಂದನೀಯ ವರ್ತನೆಯ ಪ್ರವೃತ್ತಿ ಹೆಚ್ಚುತ್ತಿದೆ. ಪ್ರೀತಿಯಿಂದ ಹಿಂದೆ ಸರಿಯುವ ಸಂಗಾತಿಯನ್ನು ಇಲ್ಲವಾಗಿಸುವ ಅನೇಕ ಘಟನೆಗಳು ರಾಜ್ಯದಲ್ಲಿ ವರದಿಯಾಗಿದೆ. ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದು ಎಲ್ಲಾ ಸಂಬಂಧಗಳನ್ನು ಉನ್ನತಿಗೆ ಕೊಂಡೊಯ್ಯಲು ಕಾರಣವಾಗುತ್ತದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಬೊಟ್ಟುಮಾಡಿದರು.
ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಪ್ರತಿ ಸಂಸ್ಥೆಯು ಆಂತರಿಕ ಅನುಸರಣೆ ಸಮಿತಿ ಇರಬೇಕೆಂಬ ನಿಯಮ ಪಾಲಿಸಲಾಗುತ್ತಿಲ್ಲ ಎಂದು ಸತಿ ದೇವಿ ಹೇಳಿದರು.ವಿವಿಧ ಸಂಸ್ಥೆಗಳ ಉದ್ಯೋಗಿಗಳ ದೂರುಗಳನ್ನು ಪರಿಹರಿಸಬೇಕಾದ ಸಂದರ್ಭಗಳಲ್ಲಿ ಉದ್ಯೋಗಿಗಳಿಗೂ ಆಡಳಿತ ವರ್ಗಕ್ಕೂ ಜವಾಬ್ದಾರಿ ದೊಡ್ಡ ಮಟ್ಟದಲ್ಲಿದೆ ಎಂದು ಸತೀದೇವಿ ಹೇಳಿರುವರು.




