ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕುಲಪತಿ ಹುದ್ದೆ ಮೇಲಿನ ಚರ್ಚೆ ಸಬಂಧ ರಾಜ್ಯಪಾಲರ ಮನವೊಲಿಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕುಲಪತಿಯಾಗಿ ಮುಂದುವರಿಯುವಂತೆ ಮನವಿ ಮಾಡಿದರು.
ವಿಶ್ವವಿದ್ಯಾನಿಲಯ-ಡಿ-ಲಿಟ್ ವಿವಾದದ ನಂತರ ಇದೇ ಮೊದಲ ಬಾರಿಗೆ ಸಿಎಂ ರಾಜ್ಯಪಾಲರಲ್ಲಿ ಮಾತುಕತೆನಡೆಸಿದ್ದಾರೆ. ಚಿಕಿತ್ಸೆಗೆಂದು ಅಮೆರಿಕಕ್ಕೆ ಹೋಗುತ್ತಿದ್ದೇನೆ ಎಂದು ದೂರವಾಣಿಯಲ್ಲಿ ಹೇಳಿದಾಗ ಮುಖ್ಯಮಂತ್ರಿಗಳು ಈ ಮನವಿ ಮಾಡಿದರು. ರಾಜ್ಯಪಾಲರಿಗೆ ವಿದೇಶಕ್ಕೆ ಹೋಗುವ ವಿವರವನ್ನೂ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
ಆದರೆ, ಪಕ್ಷದ ಸಮಾವೇಶದಲ್ಲಿ ಬಿಡುವಿಲ್ಲದ ಕಾರಣ ರಾಜ್ಯಪಾಲರನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ಸಿಎಂ ಹೇಳಿದ್ದಾರೆ. ನಿನ್ನೆ ಮಧ್ಯಾಹ್ನ ರಾಜಭವನಕ್ಕೆ ಮುಖ್ಯಮಂತ್ರಿಗಳು ರಾಜ್ಯಪಾಲರೊದಿಗೆ ಕರೆಮಾಡಿ ಮಾತನಾಡಿದರು.
ಈ ಹಿಂದೆ ಮುಖ್ಯಮಂತ್ರಿಗಳು ರಾಜ್ಯಪಾಲರ ಪತ್ರಕ್ಕೆ ಮೂರು ಬಾರಿ ಉತ್ತರ ಪತ್ರ ರವಾನಿಸಿದ್ದು, ಕುಲಪತಿ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ರಾಜ್ಯಪಾಲರು ತಿಳಿಸಿದ್ದರು. ರಾಜ್ಯಪಾಲರು ಮತ್ತು ಸರ್ಕಾರ ಮುಖಾಮುಖಿಯಾಗಬಾರದು ಮತ್ತು ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಪತಿಯಾಗಿ ಮುಂದುವರಿಯಲು ಸರ್ಕಾರ ಆಸಕ್ತಿ ಹೊಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.




