ಲಖನೌ: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯೇ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲು ಏಕೈಕ ಪುರಾವೆಯಾಗಿ ಸಾಕಾಗಲಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
0
samarasasudhi
ಜನವರಿ 08, 2022
ಲಖನೌ: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯೇ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲು ಏಕೈಕ ಪುರಾವೆಯಾಗಿ ಸಾಕಾಗಲಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ಏಕ ಸದಸ್ಯ ಪೀಠವು, ನಾಲ್ಕು ವರ್ಷಗಳ ಕಠಿಣ ಸಜೆ ವಿಧಿಸಿದ್ದ ಕೆಳಹಂತದ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮುಸ್ತಕೀಂ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಆದೇಶಿಸಿತು. ಅರ್ಜಿಯನ್ನು ವಜಾ ಮಾಡಿತು.
ಈ ಪ್ರಕರಣ 1987ರಲ್ಲಿ ನಡೆದಿದ್ದು, ಆಗ ಸಂತ್ರಸ್ತೆಯ ವಯಸ್ಸು 9 ವರ್ಷ. ಸಹೋದರನ್ನು ಹುಡುಕುತ್ತಾ ಹೊರಹೋಗಿದ್ದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಲು ಯತ್ನಿಸಿದ್ದರು.
ವಿಚಾರಣೆ ವೇಳೆ ಸಂತ್ರಸ್ತೆಯು ಆರೋಪಿಯು ಕೈಹಿಡಿದು ಎಳೆದೊಯ್ದು ಅತ್ಯಾಚಾರ ಎಸಗಲು ಯತ್ನಿಸಿದ ಎಂದು ಸಾಕ್ಷ್ಯ ನುಡಿದಿದ್ದಳು. ಈ ಪ್ರಕರಣದಲ್ಲಿ ಸಂತ್ರಸ್ತೆಯು ಮೊದಲಿನಿಂದಲೂ ಹೇಳಿಕೆ ಕುರಿತಂತೆ ದೃಢವಾಗಿದ್ದಾಳೆ. ಇದನ್ನೇ ಏಕೈಕ ಸಾಕ್ಷ್ಯವಾಗಿ ಪರಿಗಣಿಸಬೇಕು ಎಂದಿತು.