ನವದೆಹಲಿ: ಜಗತ್ತಿನಾದ್ಯಂತ ಒಮಿಕ್ರಾನ್ ಸೋಂಕು ಕ್ಷಿಪ್ರವಾಗಿ ಹರಡುತ್ತ ಆತಂಕ ಸೃಷ್ಟಿಸಿದೆ. ಆದರೂ, ಜಾಗತಿಕ ಅರ್ಥವ್ಯವಸ್ಥೆ ಚೇತರಿಸುವುದೆಂಬ ಆಶಾವಾದದೊಂದಿಗೆ ಒಪೆಕ್ ಮತ್ತು ಮಿತ್ರ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ನಿಯತವಾಗಿ ಏರಿಸಲು ಮಂಗಳವಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿವೆ.
0
samarasasudhi
ಜನವರಿ 07, 2022
ನವದೆಹಲಿ: ಜಗತ್ತಿನಾದ್ಯಂತ ಒಮಿಕ್ರಾನ್ ಸೋಂಕು ಕ್ಷಿಪ್ರವಾಗಿ ಹರಡುತ್ತ ಆತಂಕ ಸೃಷ್ಟಿಸಿದೆ. ಆದರೂ, ಜಾಗತಿಕ ಅರ್ಥವ್ಯವಸ್ಥೆ ಚೇತರಿಸುವುದೆಂಬ ಆಶಾವಾದದೊಂದಿಗೆ ಒಪೆಕ್ ಮತ್ತು ಮಿತ್ರ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ನಿಯತವಾಗಿ ಏರಿಸಲು ಮಂಗಳವಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿವೆ.
ಕೋವಿಡ್ ಸಂಕಷ್ಟದ ಬಳಿಕ ಲಾಕ್ಡೌನ್ ತೆರವುಗೊಳಿಸಿದ ವೇಳೆ ತೈಲ ಉತ್ಪಾದನೆ ಹೆಚ್ಚಿಸುವಂತೆ ಬಳಕೆದಾರ ರಾಷ್ಟ್ರಗಳು ಮನವಿ ಮಾಡಿದಾಗ ಒಪೆಕ್ ಮತ್ತು ಮಿತ್ರ ರಾಷ್ಟ್ರಗಳು ಅದನ್ನು ತಿರಸ್ಕರಿಸಿದ್ದವು. ಕಳೆದ ವರ್ಷ ನವೆಂಬರ್ನಲ್ಲಿ ಅಮೆರಿಕ, ಭಾರತ ಸೇರಿ ಬಳಕೆದಾರ ರಾಷ್ಟ್ರಗಳು ಇದಕ್ಕೆ ಪ್ರತಿಯಾಗಿ ತಮ್ಮಲ್ಲಿರುವ ತುರ್ತಪರಿಸ್ಥಿತಿ ಬಳಕೆಯ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ತೈಲದರ ಏರಿಕೆ ತಡೆಯಲು ಕ್ರಮ ತೆಗೆದುಕೊಂಡಿದ್ದವು.
ಇದೇ ವೇಳೆ, ಭಾರತದ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ ಕಚ್ಚಾ ತೈಲ ಫ್ಯೂಚರ್ ದರ ಪ್ರತಿ ಬ್ಯಾರೆಲ್ಗೆ 20 ರೂಪಾಯಿ ಏರಿ 5,697 ರೂಪಾಯಿ ಆಗಿದೆ. ಜನವರಿಯಲ್ಲಿ ವಿಲೇವಾರಿ ಆಗಬೆಕಾದ ಕಚ್ಚಾ ತೈಲ 8,108 ಸ್ಲಾಟ್ಗಳಲ್ಲಿ 20 ರೂಪಾಯಿ ಏರಿದೆ. ಜಾಗತಿಕವಾಗಿ ವೆಸ್ಟ್ ಟೆಕ್ಸಾಸ್ ಇಂಟರ್ವಿುೕಡಿಯೇಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್ ದರ 76.33 ಡಾಲರ್ ಆಗಿತ್ತು. ನ್ಯೂಯಾರ್ಕ್ನಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ 79.23 ಡಾಲರ್ ಆಗಿತ್ತು.