HEALTH TIPS

ಹಣದ ಬದಲು RTO ಅಧಿಕಾರಿಗಳು ಸ್ವೀಕರಿಸುತ್ತಿರೋ ಲಂಚದ ಮತ್ತೊಂದು ವಿಧಾನ ತಿಳಿದ್ರೆ ಶಾಕ್​ ಆಗ್ತೀರಾ!

           ವಾಲಯರ್​: ಆರ್​ಟಿಒ ಕಚೇರಿಯಲ್ಲಿನ ಭ್ರಷ್ಟಾಚಾರದ ಕಹಿ ಅನುಭವವನ್ನು ಬಹುತೇಕರು ಅನುಭವಿಸೇ ಇರುತ್ತಾರೆ. ಅದರಲ್ಲೂ ಆರ್​ಟಿಒ ಚೆಕ್​ಪೋಸ್ಟ್​ಗಳಲ್ಲಿ ಅಧಿಕಾರಿಗಳ ಲಂಚಾವತಾರ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಇತ್ತೀಚೆಗೆ ಲಂಚಬಾಕರ ಮೇಲಿನ ದಾಳಿಗಳ ಸಂಖ್ಯೆಯು ಕೂಡ ಅಧಿಕವಾಗಿರುವ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳ ಲಂಚ ತೆಗೆದುಕೊಳ್ಳುವ ವಿಧಾನವನ್ನು ಬದಲಿಸಿದ್ದಾರೆ.

          ಕೇರಳದ ಆರ್​ಟಿಒ ಅಧಿಕಾರಿಗಳ ವಿನೂತನ ಲಂಚ ಪ್ರಕರಣ ಬಯಲಾಗಿದೆ. ವಾಲಯರ್​ನ ಆರ್​ಟಿಒ ಚೆಕ್​ ಪೋಸ್ಟ್​ ಮೇಲೆ ಕೇರಳ ವಿಜಿಲೆನ್ಸ್​ ಅಧಿಕಾರಿಗಳು ದಾಳಿ ಮಾಡಿದಾಗ ಆರ್​ಟಿಒ ಅಧಿಕಾರಿಗಳು ತರಕಾರಿ ಮತ್ತು ಹಣ್ಣಿನ ರೂಪದಲ್ಲಿ ಲಂಚ ತೆಗೆದುಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಣದ ಬದಲಾಗಿ ಕುಂಬಳಕಾಯಿ ಮತ್ತು ಕಿತ್ತಳೆ ಹಣ್ಣು ಸೇರಿದಂತೆ ಇತರೆ ರೂಪದಲ್ಲಿ ಲಂಚ ಪಡೆಯುತ್ತಿದ್ದಾರೆ. ದಾಳಿಯ ವೇಳೆ 67 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.

              ಲಾರಿಗಳಲ್ಲಿ ಬರುವ ವಸ್ತುಗಳನ್ನು ಲಂಚವಾಗಿ ಪಡೆದುಕೊಳ್ಳುವ ಆರ್​ಟಿಒ ಅಧಿಕಾರಿಗಳು ಅದನ್ನು ಹಂಚಿಕೊಳ್ಳುತ್ತಾರೆ. ಇದಕ್ಕೂ ಮುನ್ನ ಹಣವನ್ನು ಮಾತ್ರ ಲಂಚವನ್ನಾಗಿ ಸ್ವೀಕರಿಸುತ್ತಿದ್ದರು. ಆದರೆ, ವಿಜಿಲೆನ್ಸ್​ ಅಧಿಕಾರಗಳು ವಾಲಯರ್​ ಚೆಕ್​ಪೋಸ್ಟ್​ ಮೇಲೆ ದಾಳಿ ನಡೆಸಿದಾಗ ಅಧಿಕಾರಿಗಳ ಮತ್ತೊಂದು ಮುಖ ಬಯಲಾಗಿದೆ.

           ದಾಳಿಯ ವೇಳೆ ಚೆಕ್​ಪೋಸ್ಟ್​ ಆಫೀಸ್​ನಲ್ಲಿದ್ದ ಮೋಟಾರು ವಾಹನ ಇನ್ಸ್​ಪೆಕ್ಟರ್​ ಬಿನೋಯ್​, ಸ್ಥಳದಿಂದ ಕಾಲ್ಕಿತ್ತಿದ್ದು, ಆತನಿಗಾಗಿ ವಿಜಿಲೆನ್ಸ್​ ತಂಡ ಶೋಧ ಕಾರ್ಯ ನಡೆಸುತ್ತಿದೆ. ದಾಳಿಯ ವೇಳೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಕೊಂಡು ಐವರು ಸಿಬ್ಬಂದಿ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries