ಕಾಸರಗೋಡು: ಕೇರಳ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಹನ್ನೊಂದನೇ ವರ್ಷದ ರಾಜ್ಯಮಟ್ಟದ ರಸಪ್ರರಶ್ನೆ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲಾ ಪ್ಲಸ್ ವನ್ ವಿದ್ಯಾರ್ಥಿಗಳಾದ ಅನುಗ್ರಹ ಜಿ.ನಾಯರ್, ಮನ್‍ಜಿತ್‍ಕೃಷ್ಣ ಎಂ.ಪಿ, ವಿವೇಕ್ ಕೃಷ್ಣ ಎ.ಪಿ ಜಿಲ್ಲೆಯನ್ನು ಪ್ರತಿನಿಧೀಕರಿಸಿದ್ದರು.
ಸ್ಪರ್ಧೆಯಲ್ಲಿ ತಂಡ 135ಅಂಕ ಗಳಿಸಿ ವಿಜೇತರಾಗಿದ್ದಾರೆ. ಕಣ್ಣೂರು ಜಿಲ್ಲೆ 85ಅಂಕಗಳೊಂದಿಗೆ ದ್ವಿತೀಯ ಸಥಾನ ಪಡೆದುಕೊಂಡಿತು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ನೀಲೇಶ್ವರದ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಗಿರುವ ನಗದು ಪುರಸ್ಕಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ, ಪ್ರಭಾರ ಜಿಲ್ಲಾ ನ್ಯಾಯಾಧೀಶ ಉಣ್ಣಿಕೃಷ್ಣನ್ ಎ.ವಿ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಉಪಾಧ್ಯಕ್ಷ ಸಬ್ ಜಡ್ಜ್ ಸುಹೈಬ್ ಎಂ, ಸೆಕ್ಷನ್ ಅಧಿಕಾರಿ ದಿನೇಶ್ ಕೆ ಉಪಸ್ಥಿತರಿದ್ದರು.




