HEALTH TIPS

ಒಮಿಕ್ರಾನ್ ಸಾಮಾನ್ಯ ಶೀತವಲ್ಲ, ಹಗುರವಾಗಿ ಪರಿಗಣಿಸಬೇಡಿ: ಕೇಂದ್ರದ ಎಚ್ಚರಿಕೆ

            ದೇಶದಲ್ಲಿ ಒಮಿಕ್ರಾನ್ ವೇಗವಾಗಿ ಹರಡುತ್ತಿದೆ. ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದರೂ ಇದರ ಅಪಾಯದ ಮಟ್ಟ ಕಡಿಮೆ ಎಂಬುವುದನ್ನು ತಜ್ಞರು ಹೇಳುತ್ತಿದ್ದಾರೆ, ಹಾಗಂತ ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ ಎಂಬುವುದಾಗಿ ಎಚ್ಚರಿಸಿದ್ದಾರೆ. ICMRನ ಸಾಂಕ್ರಮಿಕ ರೋಗ ಶಾಸ್ತ್ರಜ್ಞರು ಒಮಿಕ್ರಾನ್ ಶೀತದಂತೆ ಸಾಮಾನ್ಯ ರೋಗವಾಗಿದೆ ಎಂದು ಮಂಗಳವಾರ ಹೇಳಿದ್ದರು, ಅದಕ್ಕೆ ಕೌಂಟರ್ ನೀಡಿದ ಕೇಂದ್ರ ನೀತಿ ಆಯೋಗದ ಶಾಂಕ್ರಮಿಕ ರೋಗ ತಜ್ಞ ಒಮಿಕ್ರಾನ್‌ ಅನ್ನು ಶೀತದಂತೆ ಹಗುರವಾಗಿ ಪರಿಗಣಿಸಿದರೆ ಅಪಾಯ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.

              ಒಮಿಕ್ರಾನ್‌ ಎಂಬುವುದು ಸಾಮಾನ್ಯ ಶೀತವಲ್ಲ ಆದರೆ ಈ ರೀತಿಯ ತಪ್ಪು ಕಲ್ಪನೆ ಹೆಚ್ಚಾಗುತ್ತಿದೆ ಎಂದು ಭಾರತದ ಪ್ರಮುಖ ಸಾಂಕ್ರಮಿಕ ರೋಗ ಎಂದು ಡಾ. ವಿ ಕೆ ಪೌಲ್‌ ಹೇಳಿದ್ದಾರೆ.
               ಒಮಿಕ್ರಾನ್‌ ಕುರಿತು ಜನರಲ್ಲಿ ಇನ್ನೂ ಅನೇಕ ಗೊಂದಲಗಳಿವೆ, ಒಮಿಕ್ರಾನ್‌ ಎಂದರೇನು, ಇದು ಅಪಾಯಕಾರಿಯೇ, ಇದನ್ನು ತಡೆಗಟ್ಟಲು ಜನರು ಏನು ಮಾಡಬೇಕು ಎಂಬುವುದನ್ನು ವಿವರಿಸಿದ್ದಾರೆ ನೋಡಿ:
                ಒಮಿಕ್ರಾನ್‌ ಸಾಮಾನ್ಯ ಶೀತವಲ್ಲ ಒಮಿಕ್ರಾನ್‌ ಸಾಮಾನ್ಯ ಶೀತವಲ್ಲ, ಆದರೆ ಒಮಿಕ್ರಾನ್‌ ಒಂದು ಸಾಮಾನ್ಯ ಶೀತದಂತೆ ಎಲ್ಲರಿಗೆ ಬರುವ ಸಾಧ್ಯತೆ ಇದೆ, ಒಮಿಕ್ರಾನ್‌ ಹರಡುವುದನ್ನು ಕಡಿಮೆ ಮಾಡುವುದು ಜನರ ಕೈಯಲ್ಲಿದೆ. ಮಾಸ್ಕ್‌ ಧರಿಸಿ, ಯಾರೂ ಇನ್ನೂ ಲಸಿಕೆ ಪಡೆದಿಲ್ಲವೂ ಅವರು ತಡಮಾಡದೆ ಲಸಿಕೆ ಪಡೆಯಿರಿ ಎಂದು ಡಾ. ಪೌಲ್‌ ಹೇಳಿದ್ದಾರೆ.
            ಕೋವಿಡ್ 19 ತಡೆಗಟ್ಟಲು ಲಸಿಕೆ ಪರಿಣಾಮಕಾರಿ:  ಲಸಿಕೆ ಪಡೆದವರಲ್ಲಿ ಕೋವಿಡ್‌ 19 ಸೋಂಕು ಹೆಚ್ಚು ಗಂಬೀರ ಪರಿಣಾಮ ಬೀರದಿರುವುದು ಈಗಾಗಲೇ ಸಾಬೀತಾಗಿದೆ. ಈ ಕೋವಿಡ್‌ ಸಾಂಕ್ರಮಿಕ ತಡೆಗಟ್ಟಲು ಪ್ರತಿಯೊಬ್ಬರು ಲಸಿಕೆ ಪಡೆಯುವುದು ಅವಶ್ಯಕವಾಗಿದೆ. ಲಸಿಕೆ ಪಡೆಯದವರಲ್ಲಿ ಒಮಿಕ್ರಾನ್‌ ಹರಡುವ ಸಾಧ್ಯತೆ ಶೇ.78ರಷ್ಟು ಅಧಿಕವಿದೆ. ಎರಡು ಡೋಸ್‌ ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.90-95ರಷ್ಟು ಕಡಿಮೆ ಇದೆ. ಭಾರತದಲ್ಲಿ ಒಮಿಕ್ರಾನ್‌ ಕಡಿಮೆ ಇದೆ, ಆದರೆ ಈ ಸೋಂಕು ವೇಗವಾಗಿ ಹರಡುವುದರಿಂದ ಬಹುತೇಕ ಜನರಿಗೆ ತಗುಲವ ಸಾಧ್ಯತೆ ಇದೆ. ಆದ್ದರಿಂದ ನಿರ್ಲಕ್ಷ್ಯ ಮಾಡಬೇಡಿ, ಹೊರ ದೇಶಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ, ಆದ್ದರಿಂದ ಲಸಿಕೆ ಪಡೆಯಿರಿ ಹಾಗೂ ಕೋವಿಡ್ 19 ನಿಯಮಗಳನ್ನು ಪಾಲಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
               ಕೋವಿಡ್ 19 ತಡೆಗಟ್ಟಲು ಹಾಕಲಾಗಿರುವ ರೂಲ್ಸ್ ಅನ್ನು ಮರು ಪರಿಶೀಲಿಸಬೇಕಾಗಿದೆ:
             ಮಂಗಳವಾರ ICMR( ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್)ನ ಪ್ರಸಿದ್ಧ ಸಾಂಕ್ರಮಿಕ ರೋಗ ಶಾಸ್ತ್ರಜ್ಞ ಜಯಪ್ರಕಾಶ್ ಮುಲಿಯಿಲ್ ಕೋವಿಡ್‌ 19 ತಡೆಗಟ್ಟಲು ಹಾಕಲಾಗಿರುವ ನಿರ್ಬಂಧಗಳನ್ನು ಮರುಪರಿಶೀಲಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಒಮಿಕ್ರಾನ್‌ ಹೆಚ್ಚೇನು ಅಪಾಯಕಾರಿಯಾದ ಸೋಂಕಲ್ಲ, ಇದು ಡೆಲ್ಟಾದಂತೆ ಗಂಭೀರ ಪರಿಣಾಮ ಬೀರುತ್ತಿಲ್ಲ ಎಂಬುವುದಾಗಿ ಹೇಳಿದ್ದರು.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries