HEALTH TIPS

ಸುದ್ದಿ ಮೂಲಗಳ ಪ್ರಾಮುಖ್ಯತೆಯಲ್ಲಿ ತಾರತಮ್ಯ: 'ಗೂಗಲ್' ವಿರುದ್ಧ ಸುದ್ದಿ ಸಂಸ್ಥೆಗಳ ದೂರಿನ ಬಗ್ಗೆ ಸಿಸಿಐ ತನಿಖೆ

        ನವದೆಹಲಿ: ಟೆಕ್ ದೈತ್ಯ ಗೂಗಲ್ ಭಾರತದಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದ್ದು, ಗೂಗಲ್‌ ಹುಡುಕಾಟ ಫಲಿತಾಂಶಗಳಲ್ಲಿ ಸುದ್ದಿಗಳನ್ನು ಪ್ರಕಟಿಸುತ್ತಿರುವ ಬಗ್ಗೆ ಸುದ್ದಿ ಸಂಸ್ಥೆಗಳ ಆಕ್ಷೇಪಣೆಗಳನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಪರಿಗಣನೆಗೆ ತೆಗೆದುಕೊಂಡಿದೆ. 

         ಈ ಸಂಬಂಧ ಗೂಗಲ್ ವಿರುದ್ಧ ಸುದ್ದಿ ಪ್ರಸಾರ ಸಂಸ್ಥೆಗಳು ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವುದಾಗಿ ಶುಕ್ರವಾರ ಪ್ರಕಟಿಸಿದೆ. ಆ್ಯಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಪ್ರಾಬಲ್ಯದ ಜತೆಗೆ ಮೂರನೇ ವ್ಯಕ್ತಿಯಾಗಿ ಆ್ಯಪ್ ಡೆವಲಪರ್‌ಗಳಿಗೆ ಕಮಿಷನ್ ಹೆಸರಿನಲ್ಲಿ ಸಮಸ್ಯೆ ಸೃಷ್ಟಿಸುತ್ತಿರುವ ಆರೋಪದ ಸಂಬಂಧ ಗೂಗಲ್ ವಿರುದ್ಧ ಸಿಸಿಐ ಈಗಾಗಲೇ ತನಿಖೆ ನಡೆಸುತ್ತಿದೆ. 

          ಆದರೆ ಆಂಟಿ ಟ್ರಸ್ಟ್‌ ಕಾಯ್ದೆಯನ್ನು ಗೂಗಲ್‌ ಉಲ್ಲಂಘಿಸುತ್ತಿದೆ ಎಂದು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ ​​(DNPA) ಹೊಸದಾಗಿ CCIನ ಮೊರೆಹೋಗಿದೆ. ದೇಶದಲ್ಲಿ ಕೆಲ ಮಾಧ್ಯಮ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಡಿಜಿಟಲ್‌ ವಿಭಾಗಗಳಲ್ಲಿ ಒಂದಾಗಿರುವ ಡಿ ಎನ್‌ ಪಿ ಎ .. ತಮ್ಮ ಸದಸ್ಯರಿಗೆ ಜಾಹೀರಾತು ಆದಾಯವನ್ನು ಪಾರದರ್ಶಕವಾಗಿ ಪಾವತಿಸಲು Google ಹಿಂದೇಟು ಹಾಕುತ್ತಿದೆ ಎಂದು ದೂರಿನಲ್ಲಿ ತಿಳಿಸಿದೆ. 

          ಈ ಕುರಿತ ಅರ್ಜಿಯನ್ನು ಸಿಸಿಐ ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿತು. ದೇಶದಲ್ಲಿ ನಿರ್ದಿಷ್ಟ ಆನ್‌ಲೈನ್ ಹುಡುಕಾಟ ಸೇವೆಗಳಲ್ಲಿ ಗೂಗಲ್ ಪ್ರಾಬಲ್ಯ ಸಾಧಿಸುತ್ತಿದೆ. ಸುದ್ದಿ ಪ್ರಕಾಶಕರ ಮೇಲೆ ಅನ್ಯಾಯದ ಷರತ್ತುಗಳನ್ನು ವಿಧಿಸುತ್ತಿದೆ ಎಂಬ ಆರೋಪಗಳ ಕುರಿತು ಸಿಸಿಐ ತನಿಖೆಗೆ ಆದೇಶಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರ ವಹಿಸುವ ಸುದ್ದಿ ಮಾಧ್ಯಮವನ್ನು ಇದು ತುಳಿಯುವುದಾಗಿದೆ ಎಂದು ಅಭಿಪ್ರಾಯಪಟಿರುವ ಸಿಸಿಐ ತನಿಖೆಗೆ ಆದೇಶಿಸಿದೆ.

         ಏತನ್ಮಧ್ಯೆ, ಗೂಗಲ್‌ನಂತಹ ಆನ್‌ಲೈನ್ ಅಗ್ರಿಗೇಟರ್‌ಗಳಿಗೆ ಜಾಹೀರಾತು ಆದಾಯ ಕಳೆದುಕೊಳ್ಳುತ್ತಿರುವ ಸುದ್ದಿ ಸಂಸ್ಥೆಗಳು, ಟೆಕ್ ಕಂಪನಿಗಳು ತಮ್ಮ ಹುಡುಕಾಟ ಫಲಿತಾಂಶಗಳಲ್ಲಿ ಲೇಖನಗಳು, ಪಾವತಿಯಿಲ್ಲದೆ ಇತರ ಫೀಚರ್‌ ಗಳನ್ನು ಬಳಸುತ್ತಿವೆ ಎಂದು ಸುದ್ದಿ ಸಂಸ್ಥೆಗಳು ಆರೋಪಿಸುತ್ತಿವೆ. ಆದರೆ ಇದರಿಂದ ಯಾವುದೇ ಪ್ರಯೋಜನ ಕಂಡುಬಂದಿಲ್ಲ. ಭಾರತದಲ್ಲಿ ಮಾತ್ರವಲ್ಲ.. ಇದೇ ರೀತಿಯ ಆರೋಪ ಎದುರಿಸುತ್ತಿರುವ ಹಲವು ದೇಶಗಳಲ್ಲಿ  ತನಿಖಾ ಸಂಸ್ಥೆಗಳು ಭಾರಿ ದಂಡ ವಿಧಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಇತ್ತೀಚಿನ ಬೆಳವಣಿಗೆ ಗೂಗಲ್ ಅನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries