ಕಾಸರಗೋಡು: ಜಿಲ್ಲಾಡಳಿತ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ವಿದ್ಯಾನಗರದಲ್ಲಿನ ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ಜರುಗಲಿದೆ. ರಾಜ್ಯ ಬಂದರು ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹಮ್ಮದ್ ದೇವರ್‍ಕೋವಿಲ್ ಧ್ವಜಾರೋಹಣ ನಡೆಸುವರು. ಈ ಸಂದರ್ಭ ಪೊಲೀಸ್, ಅಬಕಾರಿ ವಿಭಾಗದ ನಾಲ್ಕು ಪ್ಲಟೂನ್‍ಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ. ಸಂಪೂರ್ಣ ಕೋವಿಡ್ ಮಾನದಂಡ ಪಾಲಿಸಿಕೊಂಡು ಪಥಸಂಚಲನ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.

