ಕಾಸರಗೋಡು: ಬಡವರ ಹಾಗೂ ಕೃಷಿಕರಪರ ಎಂದು ಬಿಂಬಿಸುತ್ತಿರುವ ಎಡರಂಗ ಸರ್ಕಾರ ಕೃಷಿಕರನ್ನು ಸಂಪೂರ್ಣ ನಿರ್ಲಕ್ಷಿಸುತ್ತಿರುವುದಾಗಿ ಕೃಷಿಕ ಮೋರ್ಚಾ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಯ್ ಘೋಷ್ ತಿಳಿಸಿದ್ದಾರೆ.
ಅವರು ಬಿಜೆಪಿ ಜಿಲ್ಲಾಕಚೇರಿ ಸಭಾಂಗಣದಲ್ಲಿ ನಡೆದ ಕೃಷಿಕ ಮೋರ್ಚಾ ಕಾಸರಗೋಡು ಜಿಲ್ಲಾ ನಾಯಕತ್ವ ಸಭೆ ಉದ್ಘಾಟಿಸಿ ಮಾತನಾಡಿದರು. ಕೃಷಿಕ ಮೋರ್ಚಾ Pಜಿಲ್ಲಾ ಸಮಿತಿ ಅಧ್ಯಕ್ಷ ಕುಞÂಕಣ್ಣನ್ ಬಳಾಲ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸರೀಶ್ಚಂದ್ರ ಭಂಡಾರಿ, ಕೃಷಿಕ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಇ.ಕೃಷ್ಣನ್ ಉಪಸ್ಥಿತರಿದ್ದರು.
ಕೃಷಿಕ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದು ಮಾಸ್ಟರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರವೀಣ್‍ಚಂದ್ರ ಬಲ್ಲಾಳ್ ವಂದಿಸಿದರು.

