ಕುಂಬಳೆ: ಕಳೆದ ಹನ್ನೆರಡು ವರ್ಷಗಳಿಂದ ಕಾಸರಗೋಡಿನ ಸಮಾಜ ಸೇವಾ ನಿರತ ಕಾರ್ಯಕರ್ತರ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತರ ಅನ್ನದಾನ ನೀಡುತ್ತಿರುವ ಪುಣ್ಯ ಕಾರ್ಯದ ಜೊತೆಯಲ್ಲಿ ರಕ್ತದಾನ, ಆ್ಯಂಬುಲೆನ್ಸ್ ಸೇವೆ, ವೈದ್ಯಕೀಯ ಶಿಬಿರ ಇನ್ನಿತರ ದೀನ ದು:ಖಿತ ಬಂಧುಗಳ ಸೇವೆಯಲ್ಲಿ ನಿರತವಾಗಿರುವ ದೀನ ಬಂಧು ಸೇವಾ ಟ್ರಸ್ಟ್‍ಗೆ ಕಾವು ಸಿಪಿಸಿಆರ್‍ಐ ಚೌಕಿ ಹತ್ತಿರ ಹೊಸದಾಗಿ ನಿರ್ಮಾಣ ಗೊಳ್ಳುತ್ತಿರುವ ಕಟ್ಟಡ ಶಿಲಾನ್ಯಾಸ ಫೆ.7 ರಂದು ಪೂರ್ವಾಹ್ನ 10.30 ಕ್ಕೆ ನಡೆಯಲಿದೆ.
ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಶಿಲಾನ್ಯಾಸ ಮಾಡಲಿದ್ದಾರೆ. ಶ್ರೀಮದ್ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುವರು. ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸುವರು. ರಾ.ಸ್ವ.ಸಂ. ಕರ್ನಾಟಕ ದಕ್ಷಿಣ ಪ್ರಾಂತ ಸಂಘ ಚಾಲಕ ಡಾ.ವಾಮನ ಶೆಣೈ, ಕಾವುಮಠದ ತಂತ್ರಿವರ್ಯ ಪ್ರಕಾಶನ್ ಕೆ. ಉಪಸ್ಥಿತರಿರುವರು. ಕರ್ನಾಟಕ ಸರ್ಕಾರದ ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನಿಲ್ ಕುಮಾರ್ ನಿಧಿ ಸಮರ್ಪಿಸಲಿದ್ದಾರೆ. ಪ್ರೇಮಲತಾ ಎಲ್ಲೋಜಿ ರಾವ್ ವೆಬ್‍ಸೈಟ್ ಅನಾವರಣಗೊಳಿಸುವರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಪ್ರಸ್ತಾವಿಕವಾಗಿ ಮಾತನಾಡುವರು. ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ದೇವತಾ ಸ್ತುತಿ ಹಾಡಲಿದ್ದಾರೆ.

