ಮಧೂರು: ಸಂಗೀತವು ನಮ್ಮ ಸಂಸ್ಕøತಿಯ ಒಂದು ಭಾಗವಾಗಿದೆ. ಭಾರತದ ಸಂಸ್ಕøತಿಯ ಜೀವಾಳವೇ ಕಲೆಗಳು. ಸಂಗೀತವೇ ಕಲೆಗಳ ಜೀವಾಳವಾಗಿದ್ದು, ಸಂಗೀತವಿಲ್ಲದೆ ಯಾವುದೇ ಕಲೆಯಿಲ್ಲ. ಕಲೆಗಳ ಪ್ರಥಮ ಸ್ಥಾನದಲ್ಲಿ ಸಂಗೀತ ವಿಶೇಷ ಪ್ರಾಶಸ್ತ್ಯವಿದೆ. ಸಂಗೀತವು ಎಲ್ಲ ಸ್ಥರದ ಕಲೆಗಳಿಗೆ ಆಧಾರವಾಗಿದೆ. ಸಂಗೀತ ಕಲೆಯನ್ನು ಉಳಿಸಿ ಪ್ರೋತ್ಸಾಹ ನೀಡುವ ಮೂಲಕ ನಮ್ಮ ಸಂಸ್ಕøತಿಯನ್ನು ಬೆಳೆಸಬೇಕು ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹೇಳಿದರು.
ಕಾಸರಗೋಡು ಲಲಿತ ಕಲಾಸದನದಲ್ಲಿ ನಡೆದ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಬೆಳ್ಳಿಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನವನ್ನು ನೀಡಿದರು.
ಒಂದು ಸಂಗೀತ ಶಾಲೆಯು ಎಲ್ಲಾ ವರ್ಷವೂ ವಾರ್ಷಿಕೋತ್ಸವವನ್ನು ನಡೆಸುತ್ತಾ ಇಂದು ಬೆಳ್ಳಿಹಬ್ಬವನ್ನು ಆಚರಿಸುತ್ತಿರುವುದು ಕಾಸರಗೋಡಿನ ಕಲಾಸಕ್ತರಿಗೆ ಹೆಮ್ಮೆಯ ವಿಚಾರವಾಗಿದೆ. ಈ ಸಂಗೀತ ಶಾಲೆಯು ಅದೆಷ್ಟೋ ವಿದ್ಯಾರ್ಥಿಗಳನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ್ದು, ಗುರುತಿಸಲ್ಪಟ್ಟ ಸಂಗೀತ ಶಾಲೆಯಾಗಿದೆ ಎಂದರು.
ನಿವೃತ್ತ ಉಪಜಿಲ್ಲಾಧಿಕಾರಿ ಸಿ. ಕುಮಾರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದಭರ್Àದಲ್ಲಿ ಕಳೆದ 25 ವರ್ಷಗಳಿಂದ ಸಂಗೀತ ಶಾಲೆಯೊಂದಿಗೆ ಸಹಕರಿಸಿದ ಹಿತೈಷಿಗಳು, ಕಲಾವಿದರನ್ನು ಗೌರವಿಸಲಾಯಿತು. ಸಂಗೀತ ಶಾಲೆಯ ಗುರುಗಳಾದ ಉಷಾ ಈಶ್ವರ ಭಟ್, ಸಂಚಾಲಕ ಈಶ್ವರ ಭಟ್ ಹಾಗೂ ಶಾಲಾ ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.




