HEALTH TIPS

ಸೀಸನಲ್‌ ಫ್ಲೂ, ವೈರಲ್‌ ಜ್ವರ: ಲಕ್ಷಣಗಳೇನು? ಬೇಗನೆ ಚೇತರಿಸಿಕೊಳ್ಳುವುದು ಹೇಗೆ?

         ಈಗ ಎಲ್ಲಾ ಕಡೆ ಜ್ವರ ಹೆಚ್ಚಾಗಿದೆ, ಆಸ್ಪತ್ರೆಯಲ್ಲೇ ಜ್ವರ-ಶೀತ, ಕೆಮ್ಮು ಅಂತ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಬದಲಾದ ವಾತಾವರಣ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ, ಬೆಳಗ್ಗೆ ನೋಡಿದರೆ ಮಂಜು ಸುರಿಯುತ್ತಿರುತ್ತದೆ, ಸಂಜೆ ಹೊತ್ತಿನಲ್ಲಿ ತಣ್ಣನೆಯ ಗಾಳಿ ಇದರಿಂದಾಗಿ ಜನರಲ್ಲಿ ಶೀತ-ಕೆಮ್ಮು ಹೆಚ್ಚಾಗಿ ಕಂಡು ಬರುತ್ತದೆ. ಮನೆಯಲ್ಲಿ ಒಬ್ಬರಿಗೆ ವೈರಲ್‌ ಜ್ವರ ಬಂದ್ರೆ ಮನೆಯಲ್ಲಿ ಇತರರಿಗೂ ಹರಡುವುದು.

            ವೈರಲ್‌ ಜ್ವರ ಎಂದರೇನು, ಇದರ ಲಕ್ಷಣಗಳೇನು? ವೈರಲ್‌ ಜ್ವರಕ್ಕೆ ಚಿಕಿತ್ಸೆಯೇನು ಎಂದು ನೋಡೋಣ ಬನ್ನಿ:

               ವೈರಲ್ ಜ್ವರ ಎಂದರೇನು? ನಮ್ಮ ದೇಹ ಉಷ್ನತೆ ಸಾಮಾನ್ಯಕ್ಕಿಂತ ಹೆಚ್ಚಿದ್ದರೆ ಅದು ಜ್ವರ. ವೈರಲ್‌ ಸೋಂಕು ಉಂಟಾದಾಗ ನಮ್ಮ ದೇಹಕ್ಕೆ ಅದರ ವಿರುದ್ಧ ಹೋರಾಡಲು ಸಾಧ್ಯವಾಗದಿದ್ದಾಗ ಜ್ವರ ಉಂಟಾಗುವುದು. ಸಾಮಾನ್ಯವಾಗಿ ವೈರಲ್ ಜ್ವರ ಉಂಟಾದಾಗ 3-4 ದಿನದಲ್ಲಿ ಕಡಿಮೆಯಾಗುವುದು, ಆದರೆ ಕೆಲವೊಂದು ವೈರಲ್‌ ಸೋಂಕು ಅಂದ್ರೆ ಡೆಂಗ್ಯೂ ಉಂಟಾದರೆ ತುಂಬಾ ಜ್ವರ ಇರುತ್ತದೆ.
              ವೈರಲ್‌ ಜ್ವರದ ಲಕ್ಷಣಗಳೇನು? * ಚಳಿಯಾಗುವುದು * ಬೆವರುವುದು * ನಿರ್ಜಲೀಕರಣ * ತಲೆನೋವು * ಮೈಕೈ ನೋವು * ತುಂಬಾ ಸುಸ್ತಾಗುವುದು * ಹಸಿವು ಇಲ್ಲದಿರುವುದು

              ವೈರಲ್ ಜ್ವರ ಹೇಗೆ ಹರಡುವುದು? * ಜ್ವರ ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. * ಆಹಾರ ಅಥವಾ ನೀರಿನಲ್ಲಿ ಸೋಂಕು ಇದ್ದರೆ ಆ ಆಹಾರವನ್ನು ಸೇವಿಸಿದಾಗ ಸೋಂಕು ಹರಡುವುದು. * ಸೊಂಕು ಇರುವ ವ್ಯಕ್ತಿಗೆ ಸೊಳ್ಳೆ ಕಚ್ಚಿ ಆ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದಾಗ ಸೊಂಕು ಹರಡುವುದು ಉದಾಹರಣೆಗೆ ಡೆಂಗ್ಯೂ ಅಥವಾ ಮಲೇರಿಯಾ. * ದೇಹದ ಬೆವರು ಅಥವಾ ರಕ್ತದ ಮೂಲಕ ಕೂಡ ಸೋಂಕು ಹರಡುವುದು. ಹೆಚ್‌ಐವಿ, ಹೆಪಟೈಟಿಸ್ ಬಿ ಇವೆಲ್ಲಾ ದೇಹದ ಮೂಲಕ ಮತ್ತೊಬ್ಬರಿಗೆ ಹರಡುವುದು.
              ವೈರಲ್ ಜ್ವರ ಇದೆಯೆಂದು ತಿಳಿಯುವುದು ಹೇಗೆ? * ಗಂಟಲು ಕೆರೆತ, ಸೀತ, ಕೆಮ್ಮು ಇದ್ದರೆ ಸ್ವ್ಯಾಬ್‌ ಪರೀಕ್ಷೆ ಮಾಡಿಸಿ, ಅದು ನೆಗೆಟಿವ್‌ ಬಂದ್ರೆ ಕೊರೊನಾ ಅಲ್ಲ ವೈರಲ್‌ ಜ್ವರ ಎಂದು ಹೇಳಬಹುದು. * ರಕ್ತ ಪರೀಕ್ಷೆ ಮಾಡಿಸಿದಾಗ ದೇಹದಲ್ಲಿ ಬಿಳಿ ರಕ್ತಕಣಗಳು ಕಡಿಮೆಯಾದರೆ ವೈರಲ್ ಸೋಂಕು ತಗುಲಿದೆ ಎಂದು ತಿಳಿಯುವುದು.
              ವೈರಲ್‌ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕು? * ವೈದ್ಯರು ನೀಡಿರುವ ಮಾತ್ರೆಗಳನ್ನು ಸೇವಿಸಿ. * ಸಾಕಷ್ಟು ವಿಶ್ರಾಂತಿ ಪಡೆಯಿರಿ * ಸಾಕಷ್ಟು ನೀರು ಕುಡಿಯಿರಿ * ತುಂಬಾ ಜ್ವರ ಇದ್ದರೆ ಉಗುರು ಬೆಚ್ಚಗಿನ ನೀರಿಗೆ ಟವಲ್‌ ಅದ್ದಿ ಮೈ ಒರೆಸಿ, ಹೀಗೆ ಮಾಡುವುದರಿಂದ ಮೈ ಉಷ್ಣತೆ ಕಡಿಮೆಯಾಗುವುದು. * ವಿಟಮಿನ್‌ ಸಿ ಇರುವ ಆಹಾರ ಸೇವಿಸಿ. * ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯಿರಿ * ಚಿಕನ್‌ ಸೂಪ್‌ ಮಾಡಿ ಕುಡಿಯಿರಿ. ಇವೆಲ್ಲಾ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುವುದು.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries