ನವದೆಹಲಿ: 'ಸೊಸೆಯ ಚಿನ್ನಾಭರಣಗಳನ್ನು ಪತಿಯ ಪೋಷಕರು ತನ್ನ ವಶದಲ್ಲಿ ಇಟ್ಟುಕೊಂಡಿದ್ದಲ್ಲಿ ಅದನ್ನು ಐಪಿಸಿ ಸೆಕ್ಷನ್ 498ಎ ಅನ್ವಯ ಹಿಂಸೆ ಎಂದು ಹೇಳಲಾಗದು' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
0
samarasasudhi
ಜನವರಿ 15, 2022
ನವದೆಹಲಿ: 'ಸೊಸೆಯ ಚಿನ್ನಾಭರಣಗಳನ್ನು ಪತಿಯ ಪೋಷಕರು ತನ್ನ ವಶದಲ್ಲಿ ಇಟ್ಟುಕೊಂಡಿದ್ದಲ್ಲಿ ಅದನ್ನು ಐಪಿಸಿ ಸೆಕ್ಷನ್ 498ಎ ಅನ್ವಯ ಹಿಂಸೆ ಎಂದು ಹೇಳಲಾಗದು' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ.ಮಹೇಶ್ವರಿ ಅವರಿದ್ದ ಪೀಠವು, ಪಂಜಾಬ್‌ನ ವ್ಯಕ್ತಿಯೊಬ್ಬರ ಅರ್ಜಿಯ ವಿಚಾರಣೆಯ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸೆಕ್ಷನ್ 498ಎ ಪ್ರಕಾರ, ಪತಿ ಅಥವಾ ಪತಿಯ ಸಂಬಂಧಿಕರು ನೀಡುವುದು ಕಿರುಕುಳ. ಈ ಕುರಿತು ಬಾಧಿತ ಮಹಿಳೆಯು ನೀಡುವ ದೂರು ಈ ಸೆಕ್ಷನ್‌ನ ವ್ಯಾಪ್ತಿಗೆ ಬರಲಿದೆ ಎಂದು ಹೇಳಿದೆ.
'ಅರ್ಜಿದಾರರು (ಸೊಸೆ) ಅತ್ತೆ ಮತ್ತು ಮೈದುನ ಚಿನ್ನಾಭರಣಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದು, ಆಭರಣಗಳ ವಿವರ ನೀಡಿಲ್ಲ. ಎಲ್ಲರೂ ಸೇರಿ ನನ್ನ ಜೀವನ ಹಾಳುಮಾಡಿದ್ದಾರೆ ಎಂಬ ಸಾಮಾನ್ಯ ಆರೋಪವಷ್ಟೇ ಇದೆ' ಎಂದೂ ಪೀಠವು ಹೇಳಿತು.