ನವದೆಹಲಿ: ನಿವೃತ್ತ ಯೋಧರು (ಇಎಸ್‌ಎಂ) ಮತ್ತು ಅವರ ಅವಲಂಬಿತರ ಪಿಂಚಣಿ ಸಂಬಂಧಿತ ಕುಂದುಕೊರತೆಗಳನ್ನು ಬಗೆಹರಿಸಲು ರಕ್ಷಣಾ ಸಚಿವಾಲಯವು ಆನ್‌ಲೈನ್ ಪೋರ್ಟಲ್ ಸ್ಥಾಪಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಘೋಷಿಸಿದ್ದಾರೆ.
0
samarasasudhi
ಜನವರಿ 15, 2022
ನವದೆಹಲಿ: ನಿವೃತ್ತ ಯೋಧರು (ಇಎಸ್‌ಎಂ) ಮತ್ತು ಅವರ ಅವಲಂಬಿತರ ಪಿಂಚಣಿ ಸಂಬಂಧಿತ ಕುಂದುಕೊರತೆಗಳನ್ನು ಬಗೆಹರಿಸಲು ರಕ್ಷಣಾ ಸಚಿವಾಲಯವು ಆನ್‌ಲೈನ್ ಪೋರ್ಟಲ್ ಸ್ಥಾಪಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಘೋಷಿಸಿದ್ದಾರೆ.
ಸಶಸ್ತ್ರ ಪಡೆಗಳ ನಿವೃತ್ತ ಯೋಧರ ದಿನದ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಸೈನಿಕರ ಕಲ್ಯಾಣ ಇಲಾಖೆಗೆ (ಡಿಇಎಸ್‌ಡಬ್ಯು) ನೇರವಾಗಿ ಕುಂದು ಕೊರತೆಗಳ ಕುರಿತು ಅರ್ಜಿ ಸಲ್ಲಿಸಲು ಪೋರ್ಟಲ್‌ನಲ್ಲಿ ಅವಕಾಶವಿದೆ ಎಂದು ತಿಳಿಸಿದ್ದಾರೆ.
ನಿವೃತ್ತ ಯೋಧರ ಪಿಂಚಣಿ ಸಂಬಂಧಿತ ಕುಂದುಕೊರತೆಗಳನ್ನು ಪರಿಹರಿಸಲು ವಿನ್ಯಾಸಗೊಳಿಸಿರುವ ಪೋರ್ಟಲ್ ಅನ್ನು ಘೋಷಿಸಲು' ಸಂತೋಷಪಡುತ್ತೇನೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಹುತಾತ್ಮ ಯೋಧರ ವಿಧವೆಯರಿಗೆ ಹಾಗೂ ಅವಲಂಬಿತ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ನೀಡುವ ಯೋಜನೆಗಳ ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿಗಾಗಿ ಮತ್ತು ವಿವಿಧ ಕಲ್ಯಾಣ ಯೋಜನೆಗಳಿಗಾಗಿ ಡಿಇಎಸ್‌ಡಬ್ಯು ₹320 ಕೋಟಿ ಮಂಜೂರು ಮಾಡಿದೆ ಎಂದೂ ಸಚಿವಾಲಯ ತಿಳಿಸಿದೆ.