ಕಾಸರಗೋಡು: ರಾಜ್ಯ ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆ ಜಾರಿಗೊಳಿಸುತ್ತಿರುವ ಅಯ್ಯಂಗಾಳಿ ಸ್ಮಾರಕ ಟ್ಯಾಲೆಂಟ್ ಸರ್ಚ್ ಆ್ಯಂಡ್ ಡೆವೆಲಪ್‍ಮೆಂಟ್ ಸ್ಕೀಂ ಸ್ಕಾಲರ್‍ಶಿಪ್‍ಗಾಗಿ 2022-23ನೇ ಸಾಲಿನ ಪ.ವರ್ಗ ವಿದ್ಯಾರ್ಥಿಗಳ ಆಯ್ಕೆಗಾಗಿ 2021-22ನೇ ಅಧ್ಯಯನ ವರ್ಷದಲ್ಲಿ 4ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮಾ 12ರಂದು ಪರೀಕ್ಷೆ ನಡೆಯಲಿದೆ.
ಕೇರಳದ ಪ.ವರ್ಗ ವಿಭಾಗದಲ್ಲಿ ಒಳಗೊಂಡ, ವಾರ್ಷಿಕ 50ಸಾವಿರ ಆದಾಯಕ್ಕಿಂತ ಕಡಿಮೆಯಿರುವ ಕುಟುಂಬಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತ್ಯೇಕ ದುರ್ಬಲ ವಿಭಾಗ ಗೋತ್ರ ಸಮುದಾಯಕ್ಕೊಳಪಟ್ಟವರಿಗೆ ಆದಾಯ ಅನ್ವಯವಾಗದು. ಅರ್ಜಿ ಸಲ್ಲಿಸಲಿಚ್ಛಿಸುವ ಪ.ವರ್ಗ ವಿದ್ಯಾರ್ಥಿಗಳು ಕಾಸರಗೋಡು ಟ್ರೈಬಲ್ ಡೆವೆಲಪ್‍ಮೆಂಟ್ ಕಚೇರಿಯ ಕಾಸರಗೋಡು, ನೀಲೇಶ್ವರ, ಎಣ್ಮಕಜೆ ಎಕ್ಸ್‍ಟೆನ್ಶನ್ ಕಚೇರಿಗಳಿಗೆ ಫೆ. 21ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಜಾತಿ ಅಥವಾ ಆದಾಯ ಸರ್ಟಿಫಿಕೇಟ್ ಹಾಜರುಪಡಿಸಬೇಕಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ(04994-255466)ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




