HEALTH TIPS

ಬಿಹಾರದಲ್ಲಿ ಮತ್ತೇರಿಸುವ ಪದಾರ್ಥ ಸೇವನೆ: ಐವರ ಸಾವು

               ಪಟ್ನಾ: ಮತ್ತೇರಿಸುವ ಪದಾರ್ಥ ಸೇವಿಸಿ ಐವರು ಮೃತಪಟ್ಟ ಘಟನೆ ಬಿಹಾರದ ಬಕ್ಸಾರ್‌ ಜಿಲ್ಲೆಯ ಅನ್ಸಾರ್ ಗ್ರಾಮದಲ್ಲಿ ನಡೆದಿದೆ.

                'ಗುರುವಾರ ನಸುಕಿನಲ್ಲಿ ಈ ಪದಾರ್ಥವನ್ನು ಸೇವಿಸಿದವರ ಪೈಕಿ ಎಂಟು ಜನರು ಅಸ್ವಸ್ಥಗೊಂಡರು. ಐವರು ಮೃತಪಟ್ಟಿದ್ದು, ಇತರರು ವಾಂತಿಯಿಂದ ಬಳಲುತ್ತಿದ್ದಾರೆ' ಎಂದು ಜಿಲ್ಲಾಧಿಕಾರಿ ಅಮನ್‌ ಸಮೀರ್‌ ಹೇಳಿದ್ದಾರೆ.

                 'ಬಿಳಿ ಬಣ್ಣದ ರಾಸಾಯನಿಕ ಸೇವನೆಯೇ ಸಾವಿಗೆ ಕಾರಣ. ಕೆಲ ಪೆಟ್ಟಿಗೆಗಳಲ್ಲಿದ್ದ ಈ ರಾಸಾಯನಿಕವನ್ನು ಅವರು ಕುಡಿದಿದ್ದಾರೆ. ಹೀಗಾಗಿ ಆ ಪದಾರ್ಥ ಯಾವುದು ಎಂಬುದನ್ನು ಪತ್ತೆ ಹಚ್ಚಲು, ಪೆಟ್ಟಿಗೆಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ' ಎಂದೂ ಅವರು ಹೇಳಿದ್ದಾರೆ.

'ಮೃತಪಟ್ಟವರು ಹಾಗೂ ಚಿಕಿತ್ಸೆ ಪಡೆಯುತ್ತಿರುವವರೆಲ್ಲರೂ ಸೇವನೆ ಮಾಡಿದ್ದು ಮದ್ಯ' ಎಂದು ಗ್ರಾಮಸ್ಥರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries