HEALTH TIPS

ರಾಜ್ಯದಲ್ಲಿ ಇಂದು 15,184 ಮಂದಿಗೆ ಕೋವಿಡ್ ಪತ್ತೆ: 73,965 ಮಾದರಿಗಳ ಪರೀಕ್ಷೆ


           ತಿರುವನಂತಪುರ: ರಾಜ್ಯದಲ್ಲಿ ಇಂದು 15,184 ಮಂದಿಗೆ ಕೊರೋನಾ ದೃಢಪಟ್ಟಿದೆ.
ಎರ್ನಾಕುಳಂ 2973, ತಿರುವನಂತಪುರ 1916, ಕೋಝಿಕ್ಕೋಡ್ 1446, ಕೊಲ್ಲಂ 1383, ಕೊಟ್ಟಾಯಂ 1367, ತ್ರಿಶೂರ್ 1061, ಆಲಪ್ಪುಳ 1006, ಮಲಪ್ಪುರಂ 838, ಪತ್ತನಂತಿಟ್ಟ 739, ಇಡುಕ್ಕಿ 620, ಪಾಲಕ್ಕಾಡ್ 606, ಕಣ್ಣೂರು 597,  ವಯನಾಡ್ 427, ಕಾಸರಗೋಡು  205 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ.
       ಕಳೆದ 24 ಗಂಟೆಗಳಲ್ಲಿ 73,965 ಮಾದರಿಗಳನ್ನು ಪರೀಕ್ಷಿಸಲಾಗಿದೆ.
        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,31,518 ಮಂದಿ ಜನರು ನಿಗಾದಲ್ಲಿದ್ದಾರೆ.  ಇವರಲ್ಲಿ 3,25,011 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 6507 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ.  ಒಟ್ಟು 1134 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಪ್ರಸ್ತುತ 1,81,347 ಕೊರೋನಾ ಪ್ರಕರಣಗಳಲ್ಲಿ,  3.9 ಪ್ರತಿಶತದಷ್ಟು ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
         ಕಳೆದ 24 ಗಂಟೆಗಳಲ್ಲಿ 23 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.  ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 122 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 282 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 62,053ಕ್ಕೆ ಏರಿಕೆಯಾಗಿದೆ.  
       ಇಂದು ಸೋಂಕು ಪತ್ತೆಯಾದವರಲ್ಲಿ 70 ಮಂದಿ ಹೊರ ರಾಜ್ಯದವರು.  ಸಂಪರ್ಕದ ಮೂಲಕ 13,838 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ. 1152 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 124 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಯಾಗಿದೆ.
      ಒಟ್ಟು ಸೋಂಕು ಬಾಧಿತರಲ್ಲಿ  38,819 ಮಂದಿ ಜನರು ಚಿಕಿತ್ಸೆಪಡೆದು ಗುಣಮುಖರಾಗಿದ್ದಾರೆ.  ತಿರುವನಂತಪುರ 7104, ಕೊಲ್ಲಂ 2146, ಪತ್ತನಂತಿಟ್ಟ 1981, ಆಲಪ್ಪುಳ 2672, ಕೊಟ್ಟಾಯಂ 3342, ಇಡುಕ್ಕಿ 1884, ಎರ್ನಾಕುಳಂ 6015, ತ್ರಿಶೂರ್ 3699, ಪಾಲಕ್ಕಾಡ್ 1762, ಮಲಪ್ಪುರಂ 2489, ಕೋಝಿಕ್ಕೋಡ್ 2368, ವಯನಾಡ್ 1160, ಕಣ್ಣೂರು 1807, ಕಾಸರಗೋಡು 390 ಎಂಬಂತೆ ಗುಣಮುಖರಾಗಿದ್ದಾರೆ.
      ಪ್ರಸ್ತುತ  1,81,347 ಮಂದಿ ಜನರು ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದಾರೆ. ಇದುವರೆಗೆ 61,52,076 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries